ಇನ್ನು ಐಎನ್ ಎಸ್ ವಿರಾಟ್ ನಲ್ಲಿ ಸಾವಿರ ಯೋಧರು ಮತ್ತು ಐಎನ್ಎಸ್ ಜ್ಯೋತಿ ನೌಕೆಗಳಲ್ಲಿಯೂ ಯೋಧರು ಯೋಗ ಅಭ್ಯಾಸ ಮಾಡಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಐಎನ್ಎಸ್ ಜ್ಯೋತಿ ನೌಕೆಯಲ್ಲಿ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಫ್ಲಾಗ್ ಆಫೀಸರ್ ಗಳ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಅಂತೆಯೇ ವಿಶಾಖಪಟ್ಟಣದಲ್ಲಿರುವ ಜಲಾಂತರ್ಗಾಮಿಯೊಳಗೇ ನಾವಿಕರು ಯೋಗ ಮಾಡಿದ್ದು ವಿಶೇಷವಾಗಿತ್ತು.