

ವಡೋದಾರ: ಗುರ್ ಗಾಂವ್ ನಲ್ಲಿ ಕಳೆದ ವರ್ಷ ನಡೆದಿದ್ದ ರೆಯಾನ್ ಇಂಟರ್ ನ್ಯಾಷನಲ್ ಶಾಲಾ ಬಾಲಕ ಪ್ರದ್ಯುಮನ್ ಠಾಕೂರ್ ಹತ್ಯೆ ರೀತಿಯಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಶಾಲೆಯೊಂದರ ಶೌಚಾಗೃಹದಲ್ಲಿ 9 ನೇ ತರಗತಿ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ಮೊದಲಿಗೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲಾಗಿದ್ದು, ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತೆ ಕಂಡುಬಂದಿದೆ.