ಭಾರತದೊಳಗೆ ನುಸುಳಲು ಗಡಿಯಲ್ಲಿ ಸಿದ್ಧವಾಗಿ ನಿಂತಿದ್ದಾರೆ 250 ಉಗ್ರರು!

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ತೀವ್ರಗೊಳಿಸಿದ ಬೆನ್ನಲ್ಲೇ, ಕಣಿವೆ ರಾಜ್ಯಾದಾದ್ಯಂತ 250ಕ್ಕೂ ಹೆಚ್ಚು ಮಂದಿ ಭಯೋತ್ಪಾದಕರು ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ತೀವ್ರಗೊಳಿಸಿದ ಬೆನ್ನಲ್ಲೇ, ಕಣಿವೆ ರಾಜ್ಯಾದಾದ್ಯಂತ 250ಕ್ಕೂ ಹೆಚ್ಚು ಮಂದಿ ಭಯೋತ್ಪಾದಕರು ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 
ಈ ಬಗ್ಗೆ ಬಾರಾಮುಲ್ಲಾದಲ್ಲಿ ಮಾತನಾಡಿರುವ ಲೆ.ಜ.ಎ.ಕೆ.ಭಟ್ ಅವರು, ಕಾಶ್ಮೀರ ಕಣಿವೆಯಲ್ಲಿ 250 ರಿಂದ 275 ಉಗ್ರರು ಸಕ್ರಿಯರಾಗಿದ್ದಾರೆ. ಅಲ್ಲದೆ, ಗಡಿ ರೇಖೆಯಲ್ಲಿ ಭಾರತದ ಮೇಲೆ ವಿಧ್ವಂಸಕ ಕೃತ್ಯವೆಸಗಲು 25ರಿಂದ 30 ತಂಡಗಳ ಒಟ್ಟು 250ರಿಂದ 270 ಉಗ್ರರು ಸಿದ್ಧರಾಗಿ ನಿಂತಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ. 
ದಕ್ಷಿಣಕ್ಕೆ ಹೋಲಿಸಿದರೆ ಉತ್ತರ ಭಾಗದಲ್ಲಿನ ಪರಿಸ್ಥಿತಿ ಉತ್ತಮವಾಗಿದೆ. ದಕ್ಷಿಣ ಕಾಶ್ಮೀರಕ್ಕೆ ಹೋಲಿಕೆ ಮಾಡಿದರೆ, ಉತ್ತರದಲ್ಲಿ ಉಗ್ರರ ಸಂಖ್ಯೆ ಕಡಿಮೆಯಿದೆ. ಇಲ್ಲದೆ, ಉತ್ತರ ಕಾಶ್ಮೀರದಲ್ಲಿನ ಪರಿಸ್ಥಿತಿ ಕೂಡ ಉತ್ತಮವಾಗಿದೆ. ಇದಕ್ಕೆ ಜನತೆಗೆ ಪ್ರಮುಖವಾಗಿ ಯುವಕರಿಗೆ ಧನ್ಯವಾದಗಳನ್ನು ಹೇಳುತ್ತೇನೆಂದು ತಿಳಿಸಿದ್ದಾರೆ. 
ಶ್ರೀನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಎನ್ಎಸ್'ಜಿ ಕೈಜೋಡಿಸುವುದೇ ಎಂಬ ಪ್ರಶ್ನಗೆ ಉತ್ತರಿಸಿರುವ ಅವರು, ಶ್ರೀನಗರದಲ್ಲಿ ಪೊಲೀಸರೊಂದಿಗೆ ಎನ್ಎಸ್'ಜಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com