ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ಕಾರ್ತಿ ವಿದೇಶಕ್ಕೆ ಹೋಗಿದ್ದಾಗ ಎಸಗಿದ ಕೃತ್ಯಗಳ ಆಘಾತಕಾರಿ ಸಾಕ್ಷ್ಯಗಳಿವೆ. ಹಣ ಸ್ವೀಕರಿಸಿದ ವಿದೇಶಿ ಬ್ಯಾಂಕ್ ಖಾತೆಗಳನ್ನು ಅವರು ಮುಚ್ಚಿದ್ದಾರೆ ಎಂದು ಸಿಬಿಐ ಆರೋಪಿಸಿತು. ಇದು ರಾಜಕೀಯ ದ್ವೇಷದ ಪ್ರಕರಣ ಅಲ್ಲ, ಸಂವಿಧಾನ ಪ್ರಕಾರವೇ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.