ಅಂತೆಯೇ ರಾಜಕೀಯದಲ್ಲಿ ರಾಹುಲ್ ಗಾಂಧಿ ಇನ್ನೂ ನರ್ಸರಿ ವಿದ್ಯಾರ್ಥಿಯಾಗಿದ್ದು, ಅಮಿತ್ ಶಾ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಎಂದು ಬಿಸ್ವಾ ಕಾಂಗ್ರೆಸ್ ಗೆ ಟಾಂಗ್ ನೀಡಿದರು. ರಾಜಕೀಯ ನಿರ್ವಹಣಾ ಸಾಮರ್ಥ್ಯದಲ್ಲಿ ರಾಹುಲ್ ಗಾಂಧಿಗೂ ಅಮಿತ್ ಶಾ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ. ತ್ರಿಪುರಾ ಚುನಾವಣೆ ಇದಕ್ಕೊಂದ ಸ್ಪಷ್ಚ ನಿದರ್ಶನವಾಗಿದ್ದು, ತ್ರಿಪುರಾದಲ್ಲಿ ಖಂಡಿತಾ ಬಿಜೆಪಿ 45 ಸ್ಥಾನಗಳನ್ನು ಗಳಿಸಲಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ರಚನೆ ಮಾಡಲಿದೆ ಎಂದು ಹೇಳಿದರು.