ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ; ನಾಳೆ ಮುಂಬೈ ವಿಧಾನಸೌಧಕ್ಕೆ ಮುತ್ತಿಗೆ ಸಾಧ್ಯತೆ!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಇದೀಗ ಮುಂಬೈ ತಲುಪಿದ್ದು...
ರೈತರ ಬೃಹತ್ ರ್ಯಾಲಿ
ರೈತರ ಬೃಹತ್ ರ್ಯಾಲಿ
Updated on: 
ಮುಂಬೈ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಇದೀಗ ಮುಂಬೈ ತಲುಪಿದ್ದು, ಸೋಮವಾರ ಬೆಳಗ್ಗೆ ಸುಮಾರು 35 ಸಾವಿರ ರೈತರು ಮಹಾರಾಷ್ಟ್ರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ರೈತರ ಸಾಲಾ ಮನ್ನಾ ಮಾಡಬೇಕು , ಅರಣ್ಯಭೂಮಿಗಳನ್ನು ರೈತರಿಗೆ ನೀಡಬೇಕು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮುಂಬೈನಲ್ಲಿ ಸುಮಾರು 35 ಸಾವಿರ ರೈತರು ಧಾವಿಸಿದ್ದು, ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದಾರೆ. ಇದೇ ವೇಳೆ ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು ಸೋಮವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.
ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ರೈತರು ಸಯನ್ ನಲ್ಲಿರುವ ಸೋಮಾಯ ಮೈದಾನದಲ್ಲಿ ಸೇರಿದ್ದು, ನಾಳೆ ಇಲ್ಲಿಂದಲೇ ವಿಧಾನಸೌಧ ಮುತ್ತಿಗೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 5ರಂದು ನಾಸಿಕ್ ನಲ್ಲಿ ಆರಂಭವಾದ ಬೃಹತ್ ರ್ಯಾಲಿ ಬರೊಬ್ಬರಿ 180 ಕಿ.ಮೀ ಕ್ರಮಿಸಿ ಇದೀಗ ಮುಂಬೈ ತಲುಪಿದೆ. ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದು, ಮುಂಬೈನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com