ಫೇಸ್ ಬುಕ್ ಗೆಳತಿಗಾಗಿ ಹೆತ್ತವರನ್ನೇ ಹತ್ಯೆ ಮಾಡಿದ!

ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ವಿವಾಹವಾಗಲು ಅನುಮತಿ ನೀಡುವುದಕ್ಕೆ ನಿರಾಕರಿಸಿದ ಪೋಷಕರನ್ನು ದೆಹಲಿಯ 26 ವರ್ಷದ ಯುವಕ ಹತ್ಯೆ ಮಾಡಿದ್ದಾನೆ.
ಫೇಸ್ ಬುಕ್ ಗೆಳತಿಗಾಗಿ ಹೆತ್ತವರನ್ನೇ ಹತ್ಯೆ ಮಾಡಿದ!
ಫೇಸ್ ಬುಕ್ ಗೆಳತಿಗಾಗಿ ಹೆತ್ತವರನ್ನೇ ಹತ್ಯೆ ಮಾಡಿದ!
Updated on
ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ವಿವಾಹವಾಗಲು ಅನುಮತಿ ನೀಡುವುದಕ್ಕೆ ನಿರಾಕರಿಸಿದ ಪೋಷಕರನ್ನು ದೆಹಲಿಯ 26 ವರ್ಷದ ಯುವಕ ಹತ್ಯೆ ಮಾಡಿದ್ದಾನೆ. 
ದೆಹಲಿಯ ಆಗ್ನೇಯ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಅಬ್ದುಲ್ ರೆಹಮಾನ್ ತನ್ನ ಪೋಷಕರನ್ನು ಹತ್ಯೆ ಮಾಡಿದವನಾಗಿದ್ದಾನೆ.  ಖಾನ್ ಪುರದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಅಬ್ದುಲ್ ರೆಹಮಾನ್ ಪೋಷಕರ ಸುಪರ್ದಿನಲ್ಲಿದ್ದ ಆಸ್ತಿಯನ್ನು ಪಡೆಯಲು ಪೋಷಕರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
ಆರೋಪಿ ರೆಹಮಾನ್ ಗೆ ಈಗಾಗಲೇ ಒಂದು ವಿವಾಹವಾಗಿದ್ದು, ವಿಚ್ಛೇದನ ಪಡೆದಿದ್ದಾನೆ, ಈ ಘಟನೆಯ ಬಳಿಕ ಫೇಸ್ ಬುಕ್ ನಲ್ಲಿ ಮಹಿಳೆಯೊಬ್ಬರು ಪರಿಚಯವಾಗಿದ್ದಾಳೆ. ಈ ನಡುವೆ  2017 ರಲ್ಲಿ ಪೋಷಕರ ಇಚ್ಛೆಯಂತೆ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ. ಆದರೆ ಫೇಸ್ ಬುಕ್ ಗೆಳತಿಯೊಂದಿಗೆ ವಿವಾಹೇತರ ಸಂಬಂಧ ಮಾತ್ರ ಮುಂದುವರೆದಿದ್ದು ಆಕೆಯನ್ನೂ ವಿವಾಹವಾಗುವುದಾಗಿ ಭರವಸೆ ನೀಡಿದ್ದಾನೆ. 
ಪೋಷಕರ ಬಳಿಯೂ ಫೇಸ್ ಬುಕ್ ಗೆಳತಿಯ ಬಗ್ಗೆ ತಿಳಿಸಿದ್ದ ರೆಹಮಾನ್, ಆಕೆಯನ್ನೂ ವಿವಾಹವಾಗುತ್ತೇನೆ ಎಂದು ಪಟ್ಟಿ ಹಿಡಿದಿದ್ದಾನೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಪೋಷಕರನ್ನು ಹತ್ಯೆ ಮಾಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com