ಈ ವಿಡಿಯೋ ನೋಡಿದ್ರೆ ಖಂಡಿತ ನಿಮ್ಮ ಮಕ್ಕಳಿಗೆ ಪ್ರತ್ಯೇಕ ಟ್ಯೂಶನ್‌ ಬೇಡ ಅಂತೀರಾ: ಅಮಾನುಷ ವಿಡಿಯೋ!

ಮಕ್ಕಳು ಓದಿನಲ್ಲಿ ಇನ್ನಷ್ಟು ಚುರುಕಾಗಲಿ ಅಂತ ಪೋಷಕರು ಟ್ಯೂಶನ್ ಗೆ ಸೇರಿಸುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿಗೆ ಅತ್ಯಮಾನುಷವಾಗಿ ಚಪ್ಪಲಿ ಮತ್ತು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಅಲೀಗಢ: ಮಕ್ಕಳು ಓದಿನಲ್ಲಿ ಇನ್ನಷ್ಟು ಚುರುಕಾಗಲಿ ಅಂತ ಪೋಷಕರು ಟ್ಯೂಶನ್ ಗೆ ಸೇರಿಸುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿಗೆ ಅತ್ಯಮಾನುಷವಾಗಿ ಚಪ್ಪಲಿಯಿಂದ ಹೊಡೆದಿದ್ದಲ್ಲದೇ ಆತನ ಕೈ ಬೆರಳನ್ನು ಕಚ್ಚಿದ್ದು ನೋವಿನಿಂದ ಬಾಲಕ ಚೀರುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 
ಟ್ಯೂಷನ್ ಟೀಚರ್ ಮನೆಗೆ ಬಂದು ವಿದ್ಯಾರ್ಥಿಗೆ ಹೇಳಿಕೊಡುತ್ತಿದ್ದರು. ಬಾಲಕನ ತಂದೆಯು ತನ್ನ ವರ್ಕ್ ಶಾಪ್ ನಲ್ಲಿ ಕೆಟ್ಟು ಹೋಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಸರಿಪಡಿಸಿ ಮನೆಯಲ್ಲಿ ಟ್ಯೂಶನ್ ಕೋಣೆಯಲ್ಲಿ ಪರೀಕ್ಷಾರ್ಥವಾಗಿ ಅಳವಡಿಸಿದ್ದರು. 
ಅದೇ ದಿನ ತಮ್ಮ ಮಗನಿಗೆ ಟ್ಯೂಶನ್ ಟೀಸರ್ ಪಾಠದ ವೇಳೆ ಅತ್ಯಮಾನುಷವಾಗಿ ಹೊಡೆದು ಹಿಂಸಿಸುವ ಸುಮಾರು 6 ನಿಮಿಷಗಳ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಮಗನ ಮೇಲೆ ಶಿಕ್ಷಕ ಕ್ರೌರ್ಯ ಮೆರೆದಿರುವುದನ್ನು ಕಂಡ ತಂದೆ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಟ್ಯೂಶನ್ ಟೀಸರ್ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com