ಪ್ರಕರಣ ಸಂಬಂಧ ಕಾಲಾಳು ಪಡೆ (ಇನ್'ಫೆಂಟ್ರಿ ಡೇ) ದಿನ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯ ಅಮರ ಜವಾನ್ ಜ್ಯೋತಿಯಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ರಾವತ್ ಅವರು, ಕಲ್ಲು ತೂರಾಟದ ವೇಳೆ ಹುತಾತ್ಮರಾಗಿರುವ ಯೋಧ ರಸ್ತೆ ನಿರ್ಮಾಣ ಕಾರ್ಯ ನಡೆಸುತ್ತಿದ್ದ ವೇಳೆ ಗಡಿ ರಸ್ತೆಗಳನ್ನು ಕಾಯುತ್ತಿದ್ದ ತಂಡದೊಂದಿಗಿದ್ದರು. ಕೆಲ ಜನರು ಕಲ್ಲು ತೂರಾಟಗಾರರನ್ನು ಭಯೋತ್ಪಾದಕರ ಬೆಂಬಲಿಗರೆಂದು ತಿಳಿಯಬೇಡಿ ಎಂದು ಹೇಳುತ್ತಾರೆ. ಕಲ್ಲು ತೂರಾಟಗಾರರು ಉಗ್ರರ ಕಾರ್ಯಕರ್ತರು. ಪ್ರತೀ ಬಾರಿ ಸೇನೆ ಸುಮ್ಮನೆ ಇದ್ದು, ನೋವನ್ನು ಸಹಿಸಿಕೊಳ್ಳುತ್ತಿರುತ್ತದೆ. ಆದರೆ, ಈ ಬಾರಿ ಕಲ್ಲು ತೂರಾಟಗಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಲ್ಲು ತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.