ಹೆತ್ತವರ ನೋಡಲು ವೇಷ ಮರೆಸಿಕೊಂಡರೂ ಉಗ್ರರಿಗೆ ಬಲಿಯಾದ ಅಧಿಕಾರಿ!

ದಾಳಿಯ ಭೀತಿ ಇದ್ದರು ಹೇಗಾದರೂ ಮಾಡಿ ವೃದ್ಧ ಪೋಷಕರನ್ನು ನೋಡಲೇಬೇಕೆಂದು ತೀರ್ಮಾನಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್'ಗೆ ಸೇರಿದ ಸಬ್ ಇನ್ಸ್ ಪೆಕ್ಟರ್ ಇಮ್ತಿಯಾಸ್ ಅವರು ವೇಷ ಮರೆಸಿ ತವರಿಗೆ ಹೊರಟಿದ್ದರು. ಆದರೂ ಉಗ್ರರು ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ...
ಹೆತ್ತವರ ನೋಡಲು ವೇಷ ಮರೆಸಿಕೊಂಡರೂ ಉಗ್ರರಿಗೆ ಬಲಿಯಾದ ಅಧಿಕಾರಿ!
ಹೆತ್ತವರ ನೋಡಲು ವೇಷ ಮರೆಸಿಕೊಂಡರೂ ಉಗ್ರರಿಗೆ ಬಲಿಯಾದ ಅಧಿಕಾರಿ!
Updated on: 
ಶ್ರೀನಗರ: ದಾಳಿಯ ಭೀತಿ ಇದ್ದರು ಹೇಗಾದರೂ ಮಾಡಿ ವೃದ್ಧ ಪೋಷಕರನ್ನು ನೋಡಲೇಬೇಕೆಂದು ತೀರ್ಮಾನಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್'ಗೆ ಸೇರಿದ ಸಬ್ ಇನ್ಸ್ ಪೆಕ್ಟರ್ ಇಮ್ತಿಯಾಸ್ ಅವರು ವೇಷ ಮರೆಸಿ ತವರಿಗೆ ಹೊರಟಿದ್ದರು. ಆದರೂ ಉಗ್ರರು ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 
ಭದ್ರತಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿಗರು ತಮ್ಮ ಹುದ್ದೆಯನ್ನು ತ್ಯಜಿಸಬೇಕು. ಇಲ್ಲದಿದ್ದರೆ, ಗುಂಡಿಟ್ಟು ಹತ್ಯೆಗೈಯ್ಯಬೇಕಾಗುತ್ತದೆ ಎಂದು ಕೆಲ ದಿನಗಳ ಹಿಂದಷ್ಟೇ ಉಗ್ರರು ಬೆದರಿಕೆ ಹಾಕಿದ್ದರು. 
ಈ ಹಿನ್ನಲೆಯಲ್ಲಿ ಕಾಶ್ಮೀ ಪೊಲೀಸರ ಸಿಡಿಐ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀರ್, ಸ್ವಗ್ರಾಮಕ್ಕೆ ತೆರಳಿದರೆ, ಉಗ್ರರು ದಾಳಿ ನಡೆಸಬಹುದು ಎಂಬ ಎಚ್ಚರಿಕೆಯನ್ನೂ ಸಹ ನೀಡಲಾಗಿತ್ತು. ಆದಾಗಿಯೂ, ಉಗ್ರರ ಕಣ್ತಪ್ಪಿಸಿ ಪೋಷಕರನ್ನು ಕಾಣಬೇಕೆಂಬ ಆಕಾಂಕ್ಷೆಯೊಂದಿಗೆ ಇಮ್ತಿಯಾಜ್ ಅವರು ಯಾರೂ ಗುರುತು ಹಿಡಿಯದಂತೆ ಗಡ್ಡ, ಮೀಸೆ ತೆಗೆದು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. ಆದರೆ, ಈ ವೇಳೆ ಪುಲ್ವಾಮಾ ಜಿಲ್ಲೆಯ ವಾಹಿಬಾಗ್ ನಲ್ಲಿ ಇಮ್ತಿಯಾಜ್ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 
ಉಗ್ರರು ದಾಳಿ ನಡೆಸುತ್ತಾರೆಂದು ನಾನು ಹೇಳಿದ್ದೆ. ಆದರೆ, ಪೋಷಕರನ್ನು ನೋಡಲು ಆತ ಕಾತುರನಾಗಿದ್ದ. ಇದರಂತೆ ಮನೆಗೆ ತೆರಳಲು ಸಿದ್ಧತೆ ನಡೆಸಿದ್ದ. ವೇಷ ಬದಲಿಸಿಕೊಂಡು ಕಚೇರಿಗೆ ಬಂದಿದ್ದ. ಗಡ್ಡ ಹಾಗೂ ಮೀಸೆ ತೆಗೆದು, ಖಾಸಗಿ ವಾಹನದಲ್ಲಿ ಸ್ವಗ್ರಾಮಕ್ಕೆ ತೆರಳಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಗಡ್ಡ, ಮೀಸೆ ತೆಗೆದಿದ್ದ ಇಮ್ತಿಯಾಚ್, ಇದೀಗ ಉಗ್ರರು ನನ್ನನ್ನು ಗುರುತು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿ ಕಚೇರಿಯಿಂದ ನಗು ನಗುತ್ತಲೇ ಮನೆಗೆ ಹೊರಟಿದ್ದ. ಇದೇ ಆತನ ಬಾಯಿಂದ ಬಂದ ಕೊನೆಯ ಮಾತಾಗಿತ್ತು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com