ಅಮಾಯಕ ಯುವಕರಿಗೆ ಇವರು ಎಂತಹ ಭಾವನೆಗಳನ್ನು ತುಂಬುತ್ತಿದ್ದರು ಎಂಬುದಕ್ಕೆ ಇಲ್ಲಿ ಸ್ಪಷ್ಟ ಉದಾಹರಣೆ ಇದ್ದು, ಈ ಉಗ್ರ ಕ್ಯಾಂಪ್ ನಲ್ಲಿನ ಮೆಟ್ಟಿಲುಗಳಿಗೆ ಅಮೆರಿಕ, ಭಾರತ, ಇಸ್ರೇಲ್ ಸೇರಿದಂತೆ ವಿಶ್ವದ ಮುಸ್ಲಿಮೇತರ ರಾಷಶ್ಟ್ರದಳ ಧ್ವಜಗಳ ಬಣ್ಣ ಬಳಿಸಿ ಅದರ ಮೇಲೆಯೇ ಯುವಕರು ನಡೆದಾಡುವಂತೆ ಮಾಡಿದ್ದರು. ಅಮೆರಿಕಾ, ಬ್ರಿಟನ್ ಮತ್ತು ಇಸ್ರೇಲ್ ರಾಷ್ಟ್ರಗಳ ರಾಷ್ಟ್ರಧ್ವಜಗಳನ್ನು ಮೆಟ್ಟಿಲುಗಳ ಮೇಲೆ ರಚಿಸಿ, ಅದನ್ನು ಸದಾ ತುಳಿದು ವಿಕಟ ನಗೆ ನಗುತ್ತಿದ್ದರು ಎಂಬುದೂ ಈಗ ಡಾಸಿಯರ್ ಮೂಲಕ ಬಯಲಾಗಿದೆ.