ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬೃಹತ್ ಅಡಗುದಾಣವೊಂದನ್ನು ಸೈನಿಕರು ಪತ್ತೆ ಮಾಡಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನೆ ವಶಪಡಿಸಿಕೊಂಡಿದೆ.
ಕಾಶ್ಮೀರದ ಕುಲ್ಗಾಮ್ ನ ಯರ್ಲಪೋರಾ ಪ್ರದೇಶದಲ್ಲಿ ಉಗ್ರರ ಅಡಗುದಾಣವಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬುಧವಾರ ದಾಳಿ ನಡೆಸಿದ ಸೇನೆ ಅಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ ಅಲ್ಲಿದ್ದ ಓರ್ವ ಶಂಕಿತ ಉಗ್ರಗಾಮಿಯನ್ನು ವಶಕ್ಕೆ ಪಡೆದಿದೆ. ಬಂಧಿತ ಶಂಕಿತ ಉಗ್ರನನ್ನು ಸ್ಥಳೀಯ ನಿವಾಸಿ ಹಾಗೂ ಅಡಗುದಾಣದ ಮಾಲೀಕ ಅಯೂಬ್ ರಾಥರ್ ಎಂದು ಗುರುತಿಸಲಾಗಿದೆ.
ಸೇನಾ ಮೂಲಗಳು ತಿಳಿಸಿರುವಂತೆ ಅಡಗುದಾಣದಲ್ಲಿದ್ದ ಗ್ರೆನೇಡ್ ಗಳು, ಎಕೆ 47 ಗನ್ ಗಳು, ಬಾಂಬ್ ಗಳು ಮತ್ತು ಇತರೆ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
Directorate General of Civil Aviation: Boeing 737 MAX operations will stop from/to all Indian airports. Additionally no Boeing 737 MAX aircraft will be allowed to enter or transit the Indian airspace effective 1600 hrs Indian time or 1030 UTC. pic.twitter.com/FJxGXgXPgc