ಬಿಹಾರ: 40 ಜನರಿದ್ದ ದೋಣಿ ಮಗುಚಿ ಬಿದ್ದು 7 ಸಾವು, ಹಲವರು ನಾಪತ್ತೆ

ಬಿಹಾರ-ಬಂಗಾಳ ಗಡಿ ಸಮೀಪವಿರುವ ಮಹಾನಂದ್ ನದಿಯಲ್ಲಿ ದೋಣಿ ಮಗುಚಿಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿರುವ ಘಟನೆ ಗುರುವಾರ ಸಂಭವಿಸಿದೆ.
40 ಜನರಿದ್ದ ದೋಣಿ ಮಗುಚಿ ಬಿದ್ದು 7 ಸಾವು, ಹಲವರು ನಾಪತ್ತೆ
40 ಜನರಿದ್ದ ದೋಣಿ ಮಗುಚಿ ಬಿದ್ದು 7 ಸಾವು, ಹಲವರು ನಾಪತ್ತೆ
Updated on: 

ಪಾಟ್ನ: ಬಿಹಾರ-ಬಂಗಾಳ ಗಡಿ ಸಮೀಪವಿರುವ ಮಹಾನಂದ್ ನದಿಯಲ್ಲಿ ದೋಣಿ ಮಗುಚಿಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿರುವ ಘಟನೆ ಗುರುವಾರ ಸಂಭವಿಸಿದೆ.

40 ಮಂದಿಯಿದ್ದ ಖಾಸಗಿ ದೋಣಿಯೊಂದು ಜಗನ್ನಾಥಪುರ ಘಾಟ್ ನಿಂದ ಬಿಹಾರದ ಮುಕುಂದಪುರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ದೋಣಿ ಮಗುಚಿ ಬಿದ್ದಿದ್ದು, 7 ಜನರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 

ಘಟನೆ ಬಳಿಕ ಸ್ಥಳಕ್ಕೆ ಬಂದಿರುವ ಜಿಲ್ಲಾ ಪೊಲೀಸ್, ನಾಗರೀಕ ಆಡಳಿತ ಮಂಡಳಿ ಹಾಗೂ ಎನ್'ಡಿಆರ್'ಎಫ್ ಪಡೆಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com