

ರಾಯಪುರ: ಆಗರ್ಭ ಶ್ರೀಮಂತನ ಪುತ್ರ, ದುಡ್ಡಿನ ಮದದಲ್ಲಿ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಸುತ್ತಾಡುತ್ತಾ ಲಾಕ್ ಡೌನ್ ಉಲ್ಲಂಘಿಸುತ್ತಿರುವುದನ್ನು ಫೇಸ್ ಬುಕ್ ಲೈವ್ ಮಾಡಿದ್ದು ಇದನ್ನು ಗಮನಿಸಿದ ಪೊಲೀಸರು ನಂತರ ಆತನನ್ನು ಬಂಧಿಸಿ ಕೊಟ್ಟ ಶಿಕ್ಷೆ ನೋಡಿ ನೆಟಿಗರು ಫಿದಾ ಆಗಿದ್ದಾರೆ.
ಕೊರೋನಾ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವಿಸ್ತರಿಸಿದ್ದು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಶಾಂತಿ ನಗರ ನಿವಾಸಿ ಅಭಿನಯ್ ಸೋನಿ ಎಂಬಾತ ಸೋಮವಾರ ರಾತ್ರಿ ತನ್ನ ಕಾರಿನಲ್ಲಿ ಸುತ್ತಾಡುತ್ತಾ ಲಾಕ್ ಡೌನ್ ಉಲ್ಲಂಘಿಸುತ್ತಿರುವುದನ್ನು ಫೇಸ್ ಬುಕ್ ಲೈವ್ ಮಾಡಿದ್ದ.
ಇದನ್ನು ಗಮನಿಸಿದ ಪೊಲೀಸರು ಮಾರನೇ ದಿನ ಆತನನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಬಂಧಿಸುತ್ತಿರುವ ವಿಡಿಯೋವನ್ನು ಆನತ ಖಾತೆ ಮೂಲಕ ಲೈವ್ ಮಾಡಿಸಿ ಬೇರೆಯವರು ಲಾಕ್ ಡೌನ್ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ವೇಳೆ ನಿನ್ನೆ ರಾತ್ರಿ ನಾನು ಲಾಕ್ ಡೌನ್ ಅನ್ನು ಉಲ್ಲಂಘಿಸುವ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿದ್ದೆ. ಇಂದು, ನಾನು ಮಂದಿರ್ ಹಸೌದ್ ಪೊಲೀಸ್ ಠಾಣೆಯಲ್ಲಿ ನನ್ನ ಬಂಧನದ ನೇರಪ್ರಸಾರ ನೋಡುತ್ತಿದ್ದೇನೆ "ಎಂದು ಅವರು ತಮ್ಮ ಎಫ್‌ಬಿ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಇದರ ಜೊತೆಗೆ ಜವಾಬ್ದಾರಿಯುತ ಪ್ರಜೆಯಾಗಿ ನಾನು ನನ್ನ ಅಪರಾಧವನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.