ಮಹಿಳೆಗೆ ಸಾವು ತಂದ ಬೋಂಡ!

ಗಂಟಲಲ್ಲಿ ಬೋಂಡ ಚೂರು ಸಿಲುಕಿ ಮಹಿಳೆಯೊಬ್ಬರು ಕುಸಿದು ಬಿದ್ದು ನಂತರ ಮೃತಪಟ್ಟಿರುವ ದುರ್ಘಟನೆ ಚೆನ್ನೈನ   ಚುಲೈಮೇಡು ಪ್ರದೇಶದಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ:  ಗಂಟಲಲ್ಲಿ ಬೋಂಡದ ಚೂರು ಸಿಲುಕಿ ಮಹಿಳೆಯೊಬ್ಬರು ಕುಸಿದು ಬಿದ್ದು ನಂತರ ಮೃತಪಟ್ಟಿರುವ ದುರ್ಘಟನೆ ಚೆನ್ನೈನ   ಚುಲೈಮೇಡು ಪ್ರದೇಶದಲ್ಲಿ ನಡೆದಿದೆ. 

ಮೃತ ಮಹಿಳೆಯನ್ನು ಪದ್ಮಾವತಿ(45) ಎಂದು ಗುರುತಿಸಲಾಗಿದ್ದು, ಮಹಿಳೆ ತಮ್ಮ ತಾಯಿಯೊಂದಿಗೆ ಮನೆ ಪಕ್ಕದ ಹೋಟೆಲ್‍ಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಬೋಂಡ(ಮೆದುವಡಾ) ತಿನ್ನುತ್ತಿದ್ದಂತೆ ಅದು ಗಂಟಲಲ್ಲಿ ಸಿಲುಕಿಕೊಂಡು ಮಹಿಳೆ ಉಸಿರಾಡಲು ತೊಂದರೆ ಅನುಭವಿಸಿದ್ದಾರೆ. 

ನಂತರ ಆಕೆಯನ್ನು ಕಿಲ್‍ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ.  ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com