ನಟಿ ದೀಪಿಕಾ ಪಡುಕೋಣೆ ಸೂಕ್ತ ಸಲಹೆಗೆ ನನ್ನಂತಹ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕು: ಯೋಗ ಗುರು ರಾಮ್'ದೇವ್

ಸೂಕ್ತ ಸಲಹೆಗಳಿಗಾಗಿ ನಟಿ ದೀಪಿಕಾ ಪಡುಕೋಣೆಯವರು ನನ್ನಂತಹ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕೆಂದು ಯೋಗ ಗುರು ರಾಮ್'ದೇವ್ ಅವರು ಹೇಳಿದ್ದಾರೆ...
ಯೋಗ ಗುರು ರಾಮ್'ದೇವ್
ಯೋಗ ಗುರು ರಾಮ್'ದೇವ್
Updated on

ಇಂದೋರ್: ಸೂಕ್ತ ಸಲಹೆಗಳಿಗಾಗಿ ನಟಿ ದೀಪಿಕಾ ಪಡುಕೋಣೆಯವರು ನನ್ನಂತಹ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕೆಂದು ಯೋಗ ಗುರು ರಾಮ್'ದೇವ್ ಅವರು ಹೇಳಿದ್ದಾರೆ. 

ಜೆಎನ್'ಯು ಹಿಂಸಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ದೀಪಿಕಾ ಭಾಗಿಯಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯ, ಸಮಾಜ ಹಾಗೂ ಸಾಂಸ್ಕೃತಿಕ ವಿಚಾರಗಳ ಕುರಿತು ದೀಪಿಕಾ ಅಧ್ಯಯನ ನಡೆಸುವ ಅಗತ್ಯವಿದೆ. ನಮ್ಮ ದೇಶದ ಬಗ್ಗೆ ದೀಪಿಕಾ ಹೆಚ್ಚಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಆ ಬಳಿಕವಷ್ಟೇ ಅವರಿಗೆ ಅರಿವು ಮೂಡಲಿದೆ. ಆ ಬಳಿಕವೇ ಅವರು ನಿರ್ಧಾರ ಕೈಗೊಳ್ಳಲೂ ಸಾಧ್ಯವಾಗುತ್ತದೆ. ಸೂಕ್ತ ಸಲಹೆಗಳಿಗೆ ದೀಪಿಕಾ ನನ್ನಂತಹ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com