ಬಿಹಾರ: ಚೀನಾ ಭಾರತ ಗಡಿ ಪ್ರದೇಶದಲ್ಲಿ ಘರ್ಷಣೆಯ ಪರಿಣಾಮವಾಗಿ ಭಾರತದಲ್ಲಿ ಚೀನಾ ಹೂಡಿಕೆಯಿರುವ ಅನೇಕ ಯೋಜನೆಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗ ಈ ಸಾಲಿಗೆ ಬಿಹಾರದ ಗಂಗಾ ನದಿಗೆ ಕಟ್ಟಬೇಕಾಗಿದ್ದ ಸೇತುವೆ ಯೋಜನೆಯೂ ಸೇರ್ಪಡೆಯಾಗಿದೆ.
2,900 ಕೋಟಿ ರೂಪಾಯಿ ಮೌಲ್ಯದ ಸೇತುವೆ ಯೋಜನೆ ಇದಾಗಿದ್ದು, ಚೀನಾದ ಎರಡು ಸಂಸ್ಥೆಗಳು ಇದರಲ್ಲಿ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿದೆ.
5.6 ಕಿ.ಮೀ ಉದ್ದದ ಬ್ರಿಡ್ಜ್ ನ ಯೋಜನೆಗಾಗಿ ಆಯ್ಕೆ ಮಾಡಲಾದ ನಾಲ್ಕು ಕಂಪನಿಗಳ ಪೈಕಿ ಎರಡು ಕಂಪನಿಗಳು ಇದ್ದವು ಈ ಕಾರಣದಿಂದ ಟೆಂಡರ್ ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ ಎಂದು ಬಿಹಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 2019 ರ ಡಿಸೆಂಬರ್ 16 ರಂದು ಈ ಯೋಜನೆಯನ್ನು ಅಂತಿಮಗೊಳಿಸಿತ್ತು.
Advertisement