ಗುಡಿಸಿಲ ಮೇಲೆ ಮಣ್ಣು, ಕಲ್ಲು ಕುಸಿತ: ಒಂದೇ ಕುಟುಂಬದ ಮೂವರು ಜೀವಂತ ಸಮಾಧಿ

ಪುಟ್ಟ ಗುಡಿಸಿಲಿನ ಮೇಲೆ ಮಣ್ಣು, ಕಲ್ಲು ಕುಸಿದು ಒಂದೇ ಕುಟುಂಬದ ಮೂವರು ಜೀವಂತ ಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಜರುಗಿದೆ
ಗುಡಿಸಿಲ ಮೇಲೆ ಮಣ್ಣು, ಕಲ್ಲು ಕುಸಿತ: ಒಂದೇ ಕುಟುಂಬದ ಮೂವರು ಜೀವಂತ ಸಮಾಧಿ
ಗುಡಿಸಿಲ ಮೇಲೆ ಮಣ್ಣು, ಕಲ್ಲು ಕುಸಿತ: ಒಂದೇ ಕುಟುಂಬದ ಮೂವರು ಜೀವಂತ ಸಮಾಧಿ

ಡಾರ್ಜಿಲಿಂಗ್: ಪುಟ್ಟ ಗುಡಿಸಿಲಿನ ಮೇಲೆ ಮಣ್ಣು, ಕಲ್ಲು ಕುಸಿದು ಒಂದೇ ಕುಟುಂಬದ ಮೂವರು ಜೀವಂತ ಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಜರುಗಿದೆ.

ಪತಿ, ಪತ್ನಿ ಹಾಗೂ ಅವರ 5 ವರ್ಷದ ಮಗ ನಿದ್ದೆಯಲ್ಲಿದ್ದಾಗ ಅವಘಡ ಜರುಗಿದ್ದು, ಮೂವರೂ ಮೃತಪಟ್ಟಿದ್ದಾರೆ. ಮೃತರನ್ನು ನೀಮಾ ತಮಾಂಗ್ (34), ಚಂದರಾ ತಮಾಂಗ್ (29) ಹಾಗೂ ನೆಹಾಲ್ ತಮಾಂಗ್ (05) ಎಂದು ಗುರುತಿಸಲಾಗಿದೆ.

ಕುಡಿಯುವ ನೀರಿನ ಪೈಪ್ ಒಡೆದು ನೀರು ಸೋರಿಕೆಯಾದ ಪರಿಣಾಮ ಮಣ್ಣಿನ ಗುಡ್ಡ ಮೆತ್ತಗಾಗಿ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com