ದೇಶ

ಬಿಹಾರ: ಭಾಗಲ್‍ಪುರದ ಗಂಗಾ ನದಿಯಲ್ಲಿ ದೋಣಿ ಮಗುಚಿ 30ಕ್ಕೂ ಹೆಚ್ಚು ಮಂದಿ ಸಾವು ಶಂಕೆ

ಬಿಹಾರದ ಭಾಗಲ್‍ಪುರ ಜಿಲ್ಲೆಯ ಗೋಪಾಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಟಂಗಾ ಗ್ರಾಮದ ಸಮೀಪದ ಗಂಗಾ ನದಿಯಲ್ಲಿ ನಾಡ ದೋಣಿಯೊಂದು ಮಗುಚಿ 30ಕ್ಕೂ ಹೆಚ್ಚು ಜನರು ನೀರುಪಾಲಾಗಿರುವ ಶಂಕೆ ಇದೆ.

ಬಿಹಾರ: ಭಾಗಲ್‍ಪುರದ ಗಂಗಾ ನದಿಯಲ್ಲಿ ದೋಣಿ ಮಗುಚಿ 30ಕ್ಕೂ ಹೆಚ್ಚು ಮಂದಿ ಸಾವು ಶಂಕೆ
ಸಾಂದರ್ಭಿಕ ಚಿತ್ರ
Published On :

ಭಾಗಲ್‍ಪುರ: ಬಿಹಾರದ ಭಾಗಲ್‍ಪುರ ಜಿಲ್ಲೆಯ ಗೋಪಾಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಟಂಗಾ ಗ್ರಾಮದ ಸಮೀಪದ ಗಂಗಾ ನದಿಯಲ್ಲಿ ನಾಡ ದೋಣಿಯೊಂದು ಮಗುಚಿ 30ಕ್ಕೂ ಹೆಚ್ಚು ಜನರು ನೀರುಪಾಲಾಗಿರುವ ಶಂಕೆ ಇದೆ.

ಕೃಷಿ ಕೆಲಸಗಳಿಗಾಗಿ ಸುಮಾರು 40 ಜನರು ದೋಣಿ ಮೂಲಕ ನದಿ ದಾಟುತ್ತಿದ್ದರು ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಕುನಾಲ್ ಚಕ್ರವರ್ತಿ ಹೇಳಿದ್ದಾರೆ. 

ಟಿಂಟಂಗಾ ಗ್ರಾಮದ ಬಳಿಯ ದರ್ಶನ್ ಮಾಂಜಿ ದಡದಲ್ಲಿ ಜನರು ದೋಣಿ ಹತ್ತಿದ್ದರು. ಅತಿ ಭಾರದಿಂದ ದೋಣಿ ನದಿಯ ಮಧ್ಯೆ ಮುಳುಗಿದೆ ಎಂದು ಅವರು ತಿಳಿಸಿದ್ದಾರೆ. 

ಈ ಪೈಕಿ 8 ಜನರು ಈಜಿ ಸುರಕ್ಷತವಾಗಿ ದಡ ಸೇರಿದ್ದಾರೆ. ಟಿಂಟಂಗಾ ಗ್ರಾಮದ ಸುನೈನಾ ದೇವಿ ಎಂದು ಗುರುತಿಸಲ್ಪಟ್ಟ ಮಹಿಳೆಯ ಮೃತದೇಹವನ್ನು ಸ್ಥಳೀಯರು ನದಿಯಿಂದ ಹೊರತೆಗೆದಿದ್ದಾರೆ.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ನಾಪತ್ತೆಯಾದವರ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಶೋಧ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್ ನ ಒಂದು ತಂಡ ಸಹ ಸಹಕರಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.