ಗಡಿಯಲ್ಲಿ ಪಾಕ್ ಮೂಲದ ಅಕ್ರಮ ನುಸುಳುಕೋರನ ಹೊಡೆದುರುಳಿಸಿದ ಭಾರತೀಯ ಸೇನೆ

ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ನುಸುಳುಕೋರನ್ನು ಭಾರತೀಯ ಸೇನೆಯ ಸೈನಿಕರು ಭಾನುವಾರ ತಡರಾತ್ರಿ ಹೊಡೆದುರುಳಿಸಿದ್ದಾರೆ.

Published: 27th April 2020 01:24 AM  |   Last Updated: 27th April 2020 01:27 AM   |  A+A-


Intruder shot dead

ಸಂಗ್ರಹ ಚಿತ್ರ

Posted By : srinivasamurthy
Source : PTI

ಅಮೃತಸರ: ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ನುಸುಳುಕೋರನ್ನು ಭಾರತೀಯ ಸೇನೆಯ ಸೈನಿಕರು ಭಾನುವಾರ ತಡರಾತ್ರಿ ಹೊಡೆದುರುಳಿಸಿದ್ದಾರೆ.

ಪಂಜಾಬ್ ನ ಅಮೃತಸರದ ಭಿಂಡಿ ಸೈದಾ ಗ್ರಾಮದ ಸಮೀಪದಲ್ಲಿ ಗಡಿಯಲ್ಲಿ ಅಕ್ರಮವಾಗಿ ಒಳ ನಸುಳುತ್ತಿದ್ದ ನುಸುಳಕೋರನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್ ಎಫ್ ಸೈನಿಕರು ಕರ್ತವ್ಯದಲ್ಲಿದ್ದಾಗ ಓರ್ವ ವ್ಯಕ್ತಿ ಗಡಿಯೊಳಗೆ ನುಸುಳುತ್ತಿದ್ದ.  ಇದನ್ನು ಗಮನಿಸಿದ ಸೈನಿಕರು ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ ಆತ ಸೈನಿಕರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ತನ್ನ ಕಾರ್ಯ ಮುಂದುವರೆಸಿದ್ದ. ಹೀಗಾಗಿ ಅನ್ಯಮಾರ್ಗವಿಲ್ಲದೇ ಸೈನಿಕರು ಬಂದೂಕಿನ ಮೂಲಕ ಗುಂಡು ಹಾರಿಸಿದರು. ಈ ವೇಳೆ ಆತ ಗುಂಡೇಟಿನಿಂದಾಗಿ ಸ್ಥಳದಲ್ಲೇ  ಪ್ರಾಣ ಬಿಟ್ಟಿದ್ದಾನೆ ಎಂದು ಸೇನಾಮೂಲಗಳ ತಿಳಿಸಿವೆ.

ಬಳಿಕ ಮೃತದೇಹವನ್ನು ಸೈನಿಕರು ಸುತ್ತುವರೆದಿದ್ದು, ಈ ವೇಳೆ ಆತನ ಬಳಿ ಯಾವುದೇ ರೀತಿಯ ಶಸ್ತ್ರಾಸ್ತ್ರ, ಮದ್ದು-ಗುಂಡುಗಳು, ಇತರೆ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp