ಪಶ್ಚಿಮ ಬಂಗಾಳದಲ್ಲಿ ಬಿಹಾರ ಪೊಲೀಸ್ ನಿರೀಕ್ಷಕರನ್ನು ಹೊಡೆದು ಹತ್ಯೆ!

ಬಿಹಾರದ ಪೊಲೀಸ್ ನಿರೀಕ್ಷಕರನ್ನು ಪಶ್ಚಿಮ ಬಂಗಾಳದ ಗುಂಪೊಂದು ಹೊಡೆದು ಹತ್ಯೆ ಮಾಡಿರುವ ಘಟನೆ ಏ.10 ರಂದು ವರದಿಯಾಗಿದೆ. 
ಹತ್ಯೆ (ಸಾಂಕೇತಿಕ ಚಿತ್ರ)
ಹತ್ಯೆ (ಸಾಂಕೇತಿಕ ಚಿತ್ರ)
Updated on

ಕಿಶನ್ ಗಂಜ್: ಬಿಹಾರದ ಪೊಲೀಸ್ ನಿರೀಕ್ಷಕರನ್ನು ಪಶ್ಚಿಮ ಬಂಗಾಳದ ಗುಂಪೊಂದು ಹೊಡೆದು ಹತ್ಯೆ ಮಾಡಿರುವ ಘಟನೆ ಏ.10 ರಂದು ವರದಿಯಾಗಿದೆ. 

ಕಿಶನ್ ಗಂಜ್ ನ ಪೊಲೀಸ್ ಠಾಣೆಯ ಎಸ್ ಹೆಚ್ಒ ಅಶ್ವಿನಿ ಕುಮಾರ್ ಮೃತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಸಾದರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸಲು ಬಿಹಾರದ ಕಿಶನ್ ಗಂಜ್ ನ ಗಡಿ ಪ್ರದೇಶದಲ್ಲಿರುವ ಪಶ್ಚಿಮ ಬಂಗಾಳದ ಪಂತಪಾರ ಗ್ರಾಮಕ್ಕೆ ಹೋಗಿದ್ದಾಗ ಅಲ್ಲಿನ ಸ್ಥಳೀಯರು ಪೊಲೀಸರನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ. ಗುಂಪು ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿ ಯತ್ನಿಸಿದರಾದರೂ ಸಾಧ್ಯವಾಗದೇ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. 

ಐಜಿಪಿ ಸುರೇಶ್ ಕುಮಾರ್ ಚೌಧರಿ ಘಟನೆಯನ್ನು ದೃಢಪಡಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ತಪ್ಪಿತಸ್ಥರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com