21 ವರ್ಷದ ಯುವತಿ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ, ನಡೆದಿದ್ದೆಲ್ಲಿ ಗೊತ್ತ?

ಹದಿನೈದು ವರ್ಷದ ಬಾಲಕನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಕೇರಳ ಪೊಲೀಸರು
ಕೇರಳ ಪೊಲೀಸರು
Updated on

ಮಲಪ್ಪುರಂ: ಹದಿನೈದು ವರ್ಷದ ಬಾಲಕನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿಯ ಕೊಟ್ಟುಕರ ಎಂಬ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಅತ್ಯಾಚಾರದ ಯತ್ನ ವಿಫಲವಾದ ಹಿನ್ನೆಲೆ ಬಾಲಕ ಯುವತಿ ಮುಖಕ್ಕೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಆರೋಪಿಯನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಯುವತಿ ಕೊಟ್ಟುಕರ ನಿವಾಸಿಯಾಗಿದ್ದು, ಅದೇ ಊರಿನ ಬಾಲಕ ಆಕೆಯನ್ನು ಹಿಂಬಾಲಿಸಿ ಏಕಾಏಕಿ ರಸ್ತೆ ಬದಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಮುಂದಾಗಿದ್ಧಾನೆ. ಬಳಿಕ ಯುವತಿ ಕಿರುಚಾಡುತ್ತಾ, ಸಹಾಯ ಕೋರಿ ಸಮೀಪದ ಮನೆಯೊಂದಕ್ಕೆ ಓಡಿದ್ದಾಳೆ.

ಸ್ಥಳೀಯರು ಆರೋಪಿಯನ್ನು ಹುಡುಕಿಕೊಂಡು ತಕ್ಷಣ ಸ್ಥಳಕ್ಕೆ ಬಂದಿದ್ದಾದರೂ, ಆತ ಪರಾರಿಯಾಗಿದ್ದ. ಅಲ್ಲೇ ಇದ್ದ ಆತನ ಚಪ್ಪಲಿ ವಶಪಡಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com