ಒಂದೇ ವೋಟ್ ನಲ್ಲಿ ಪಂಚಾಯಿತಿ ಎಲೆಕ್ಷನ್ ಸೋತರೂ ಚುನಾವಣಾ ಪ್ರಚಾರ ಭರವಸೆ ಈಡೇರಿಸಲು ಅಭ್ಯರ್ಥಿ ಮುಂದು
ಶ್ರೀಕಾಕುಲಂ: ವೃತ್ತಿಯಲ್ಲಿ ವಕೀಲರಾದ ಶ್ರೀರಾಮಮೂರ್ತಿ, ತಮಿಳುನಾಡಿನ ಧವಳಪೇಟ ಪಂಚಾಯಿತಿ ಚುನಾವಣೆಯಲ್ಲಿ ಒಂದೇ ವೋಟಿನಿಂದ ಸೋತಿದ್ದರು. ಆದರೆ ಚುನಾವಣಾ ಪ್ರಚಾರ ವೇಳೆ ತಾವು ನೀಡಿದ್ದ ಭರವಸೆಗಳನ್ನು ಮರೆಯದೆ ಈಡೇರಿಸುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.
ಚುನಾವಣಾ ಪ್ರಚಾರ ವೇಳೆ ಅವರು ಕಳೆದ 10 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಡ ಕುಟುಂಬವೊಂದನ್ನು ಭೇಟಿ ಮಾಡಿದ್ದರು. ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು.
ಚುನಾವಣೆಯಲ್ಲಿ ಸೋತ ನಂತರ ತಮ್ಮ ಮಾತು ಮರೆಯದ ಶ್ರೀರಾಮಮೂರ್ತಿ ತಮ್ಮ ಸ್ವಂತ ದುಡಿಮೆಯಾದ 3 ಲಕ್ಷ ರೂ. ಖರ್ಚು ಮಾಡಿ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಇದುವರೆಗೂ ಗುಡಿಸಲಿನಲ್ಲಿ ವಾಸಿಸುತ್ತಿದ್ದ 7 ಮಂದಿ ಸದಸ್ಯರ ಬಡ ಕುಟುಂಬ ಇನ್ನುಮುಂದೆ ಹೊಸಮನೆಯಲ್ಲಿ ಜೀವನ ಸಾಗಿಸಲಿದೆ. ಈ ಬಗ್ಗೆ ಮಾತನಾಡಿರುವ ಶ್ರೀರಾಮಮೂರ್ತಿ ತಾವು ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದು, ಚುನಾವಣೆಯಲ್ಲಿ ಸೋತರೂ ಜನಸೇವೆ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
Related Article
ರಷ್ಯಾದಲ್ಲಿ ಮೌಂಟ್ ಎಲ್ಬ್ರಸ್ ಶಿಖರವೇರಿದ ಬೆಂಗಳೂರಿನ ಕೋವಿಡ್ ಯೋಧ!
ವೃತ್ತಿಯ ಪಾವಿತ್ರ್ಯತೆ ಎತ್ತಿ ಹಿಡಿದ ಹೃದ್ರೋಗ ತಜ್ಞ ಪದ್ಮನಾಭ ಕಾಮತ್; ಇವರ ನಿಸ್ವಾರ್ಥ ಸೇವೆ ಜನರ ಮೆಚ್ಚುಗೆಗೆ ಪಾತ್ರ!
ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾ
ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ: ಮಧುರೈ ಶಾಲೆಯಲ್ಲಿ ವಿನೂತನ ಪ್ರಯೋಗ
ಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ