ನವದೆಹಲಿ: ಭಾರತ-ಚೀನಾ ಗಡಿ ಭಾಗಗಳ ಎಲ್ಎಸಿಯಾದ್ಯಂತ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಚೀನಾದ 5 ಜಿ ನೆಟ್ವರ್ಕ್ ನ ಉಪಟಳ ಹೆಚ್ಚಾಗಿದ್ದು, ರೇಡಿಯೋ ಸಂವಹನಕ್ಕೆ ಸಮಸ್ಯೆಯಾಗುತ್ತಿದೆ.
ಚೀನಾ ಗಡಿಯ ಪ್ರದೇಶದಲ್ಲಿ 5 ಜಿ ನೆಟ್ವರ್ಕ್ ನ್ನು ಪರಿಚಯಿಸಿದ್ದು, ಎಲ್ಎಸಿಯಾದ್ಯಂತ 5 ಜಿ ತರಂಗಗಳ ಕಾರಣದಿಂದ ಸಂವಹನ ಸಾಧನಗಳಲ್ಲಿ ವಿಚಿತ್ರವಾದ ಶಬ್ದ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ.
ಈ ವಿಚಿತ್ರ ಶಬ್ದ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಿಆರ್ ಡಿಒ ಸಹ ಕಾರ್ಯನಿರ್ವಹಿಸುತ್ತಿದ್ದು, ಕೆ-ಬ್ಯಾಂಡ್ ಫ್ರೀಕ್ವೆನ್ಸಿಯನ್ನು ಬಳಸಿಕೊಳ್ಳುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತೀಯ ಸೇನಾಪಡೆಗಳಿಗಾಗಿಯೇ ಹೊಸ ಉಪಗ್ರಹ ಉಡಾವಣೆ ಮಾಡುವ ಯೋಜನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಫ್ರೀಕ್ವೆನ್ಸಿ ಸಾಮಾನ್ಯ ಜನತೆ ಅಥವಾ ವಾಣಿಜ್ಯ ಬಳಕೆಗೆ ಮುಕ್ತವಾಗಿರುವುದಿಲ್ಲ. ರಕ್ಷಣಾ ಸೇನೆಗಳಿಗೆ ಮಾತ್ರವೇ ಸೀಮಿತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
Advertisement