ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶದ ಖುಷಿನಗರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ವ್ಯಕ್ತಿಯ ಬಂಧನ

ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ತನ್ನ ನಿವಾಸದ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಖುಷಿನಗರ: ತನ್ನ ನಿವಾಸದ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪೊಲೀಸ್ ಹೆಚ್ಚುವರಿ ಸೂಪರಿಂಟೆಡೆಂಟ್ ರಿತೇಶ್ ಕುಮಾರ್ ಸಿಂಗ್ ಮಾತನಾಡಿ, 'ಜಿಲ್ಲೆಯ ತರಿಯಾ ಸುಜನ್ ಪೊಲೀಸ್ ಠಾಣೆ ವ್ಯಾಪ್ತಿಯ ವೇದುಪಾರ್ ಮುಸ್ತಾಕ್ವಿಲ್ ಗ್ರಾಮದ ನಿವಾಸದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ. ಪೊಲೀಸರಿಗೆ ಈ ಮಾಹಿತಿ ಲಭ್ಯವಾದ ಕೂಡಲೇ ಧ್ವಜವನ್ನು ಇಳಿಸಲಾಗಿದೆ' ಎಂದು ತಿಳಿಸಿದ್ದಾರೆ.

'ಬಂಧಿತ ಆರೋಪಿಯನ್ನು ಸಲ್ಮಾನ್ (21) ಎಂದು ಗುರುತಿಸಲಾಗಿದ್ದು, ಸಲ್ಮಾನ್ ಮತ್ತು ಧ್ವಜವನ್ನು ತಯಾರಿಸಿದ ಆತನ ಚಿಕ್ಕಮ್ಮ ಶಹನಾಜ್ (22) ವಿರುದ್ಧ ಪ್ರಕರಣ ದಾಖಲಾಗಿದೆ. ಧ್ವಜ ಹಾರಿಸಲು ಸಹಾಯ ಮಾಡಿದ ಸಲ್ಮಾನ್ ಸೋದರ ಇಮ್ರಾನ್ ವಿರುದ್ಧವೂ ಬಾಲಾಪರಾಧಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ' ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com