ಜಮ್ಮು-ಕಾಶ್ಮೀರ: ಆಜಾನ್ ಮೊಳಗುತ್ತಿದ್ದಂತೆ ಭಾಷಣಕ್ಕೆ ಅಮಿತ್ ಶಾ ವಿರಾಮ

ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಆಜಾನ್ ಮೊಳಗಿದ್ದನ್ನು ಕೇಳಿ ಭಾಷಣಕ್ಕೆ ಅಲ್ಪ ವಿರಾಮ ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
Updated on

ಶ್ರೀನಗರ: ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಆಜಾನ್ ಮೊಳಗಿದ್ದನ್ನು ಕೇಳಿ ಭಾಷಣಕ್ಕೆ ಅಲ್ಪ ವಿರಾಮ ನೀಡಿದರು.

ಬಾರಾಮುಲ್ಲಾ ಜಿಲ್ಲೆಯಲ್ಲಿ ಅಮಿತ್ ಶಾ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.ಅರ್ಧ ಗಂಟೆಯ ಭಾಷಣದ ವೇಳೆ ಆಜಾನ್ ಮೊಳಗಿದ ಹಿನ್ನೆಲೆಯಲ್ಲಿ ಅಮಿತ್ ಶಾ 5 ನಿಮಿಷಗಳ ಕಾಲ ವಿರಾಮ ನೀಡಿದರು.

ಆಜಾನ್ ಮೊಳಗುತ್ತಿದ್ದಂತೆಯೇ "ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ? ಎಂದು ವೇದಿಕೆಯಲ್ಲಿದ್ದವರನ್ನು ಪ್ರಶ್ನಿಸಿದ ಅಮಿತ್ ಶಾ, ಆಜಾನ್ ನಡೆಯುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಭಾಷಣ ನಿಲ್ಲಿಸಿದರು. ಜನರು ಅಮಿತ್ ಶಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕರತಾಡನ ಮಾಡಿ, ಅಮಿತ್ ಶಾ ಪರ ಘೋಷಣೆ ಕೂಗಿದರು. ಆಜಾನ್ ನಿಲ್ಲುತ್ತಿದ್ದಂತೆಯೇ ಅಮಿತ್ ಶಾ ನಾನು ಭಾಷಣ ಮುಂದುವರೆಸಬಹುದೇ? ಎಂದು ಪ್ರಶ್ನಿಸಿ ತಮ್ಮ ಭಾಷಣ ಮುಂದುವರೆಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com