ಪನ್ನಿತಾಡಂನಲ್ಲಿ ತಾಯಿ, ಇಬ್ಬರು ಮಕ್ಕಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ!

ತ್ರಿಶೂರ್‌ನ ಕುನ್ನಂಕುಲಂ ಬಳಿಯ ಪನ್ನಿತಾಡಂ ಎಂಬಲ್ಲಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮನೆಯ ಮಹಡಿಯ ಮೇಲೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ತ್ರಿಶೂರ್: ತ್ರಿಶೂರ್‌ನ ಕುನ್ನಂಕುಲಂ ಬಳಿಯ ಪನ್ನಿತಾಡಂ ಎಂಬಲ್ಲಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮನೆಯ ಮಹಡಿಯ ಮೇಲೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತರನ್ನು 28 ವರ್ಷದ ಶಫೀನಾ, ಆಕೆಯ 3 ವರ್ಷದ ಮಗಳು ಅಜ್ವಾ ಮತ್ತು ಒಂದೂವರೆ ವರ್ಷದ ಮಗ ಅಮನ್ ಎಂದು ಗುರುತಿಸಲಾಗಿದೆ. ಬೆಳಗಿನ ವಾಕಿಂಗ್‌ಗೆ ತೆರಳುತ್ತಿದ್ದ ಸ್ಥಳೀಯರು ಮನೆಯ ಬಾಲ್ಕನಿಯಲ್ಲಿ ಸುಟ್ಟ ಶವಗಳನ್ನು ಗಮನಿಸಿದ್ದಾರೆ. 

ಶಫೀನಾ ಪತಿ ಹ್ಯಾರಿಸ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಕೇಚೇರಿ ಮೂಲದ ಶಫೀನಾ ತನ್ನ ಅತ್ತೆಯೊಂದಿಗೆ ಗಂಡನ ಮನೆಯಲ್ಲಿ ವಾಸವಾಗಿದ್ದರು.

ಎರುಮಪೆಟ್ಟಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಫೋರೆನ್ಸಿಕ್ ತಂಡ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com