ಮಧ್ಯ ಪ್ರದೇಶ: ರೂ. 50,000ಕ್ಕೆ ಅಪ್ರಾಪ್ತ ಬಾಲಕಿ ಮಾರಾಟ: ನಾಲ್ವರ ಬಂಧನ

ವ್ಯಕ್ತಿಯೊಬ್ಬರಿಗೆ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಧ್ಯ ಪ್ರದೇಶ: ವ್ಯಕ್ತಿಯೊಬ್ಬರಿಗೆ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮಂಡ್ಲಾ ಜಿಲ್ಲೆಯ ಘುಘ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿರುವ ಬಾಲಕಿ, ಜಬಲ್‌ಪುರದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಆರೋಪಿಗಳಾದ ಪಹಲ್ವತಿ ಬಾಯಿ ಮತ್ತು ಸುನಿಲ್ ಕುಶ್ವಾಹ ಭೇಟಿಯಾಗಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮೃತ್ ಮೀನಾ ತಿಳಿಸಿದ್ದಾರೆ. ಮುಂಬೈನಲ್ಲಿ ಅದಕ್ಕಿಂತ ಉತ್ತಮ ಕೆಲಸ ಕೊಡಿಸುವ ನೆಪದಲ್ಲಿ ಆರೋಪಿಗಳು ಆಕೆಗೆ ಆಮಿಷವೊಡ್ಡಿದ್ದರು.

ನಂತರ ಆರೋಪಿಗಳು ರೈಸನ್‌ನ ಪಟಾಯ್ ಗ್ರಾಮಕ್ಕೆ ತಲುಪಿದ್ದು,  ರೂ. 50,000 ರೂ.ಗೆ ವಿಷ್ಣು ಕುಶ್ವಾಹ ಎಂಬ ವ್ಯಕ್ತಿಗೆ ಮದುವೆಯಾಗಲು ಬಾಲಕಿಯ್ನು ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಮಧ್ಯೆ, ಬಾಲಕಿಯ ಪೋಷಕರು ಮಾಂಡ್ಲಾ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com