ನದಿಯಲ್ಲಿ ದೋಣಿ ಮುಳುಗಿ ಅವಘಡ: ಜಾತ್ರೆಗೆ ತೆರಳುತ್ತಿದ್ದ ನಾಲ್ವರು ಮಹಿಳೆಯರು ಸಾವು, ಹಲವರು ನಾಪತ್ತೆ

ಸೋಮವಾರ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ತಮ್ಸಾ ನದಿಯಲ್ಲಿ ಸುಮಾರು 40 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿದ ನಂತರ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಸುಮಾರು ಎರಡು ಡಜನ್ ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿಯಲ್ಲಿ ದೋಣಿ ಮುಳುಗಿ ಅವಘಡ: ಜಾತ್ರೆಗೆ ತೆರಳುತ್ತಿದ್ದ ನಾಲ್ವರು ಮಹಿಳೆಯರು ಸಾವು, ಹಲವರು ನಾಪತ್ತೆ
Updated on

ಬಲ್ಲಿಯಾ: ಸೋಮವಾರ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ತಮ್ಸಾ ನದಿಯಲ್ಲಿ ಸುಮಾರು 40 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿದ ನಂತರ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಸುಮಾರು ಎರಡು ಡಜನ್ ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ನಾಲ್ವರು ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ.

ವರದಿಗಳ ಪ್ರಕಾರ, ಮಿತಿಮೀರಿದ ಜನದಟ್ಟಣೆಯಿಂದಾಗಿ ದೋಣಿ ಮಗುಚಿ ಬಿದ್ದಿದೆ. ಜನರು ಸ್ಥಳೀಯ ಜಾತ್ರೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಬೋಟ್‌ಮೆನ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com