ಜಾಕ್ವೆಲಿನ್ ಫರ್ನಾಂಡಿಸ್ ಪೋಸ್ಟ್‌ಗೆ ಪಾಪ್ ಗಾಯಕ ಮಿಕಾ ಸಿಂಗ್‌ ಕಮೆಂಟ್; ಎಚ್ಚರಿಕೆ ನೀಡಿದ ಸುಕೇಶ್ ಚಂದ್ರಶೇಖರ್

ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬೆಲ್ಜಿಯಂನ ಖ್ಯಾತ ಮಾರ್ಷಲ್ ಆರ್ಟಿಸ್ಟ್ ಜೀನ್-ಕ್ಲೌಡ್ ವ್ಯಾನ್ ಡ್ಯಾಮ್ ಅವರೊಂದಿಗಿರುವ ಫೋಟೊವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ ಮಿಕಾ ಸಿಂಗ್ ಕಾಮೆಂಟ್ ಮಾಡಿದ ನಂತರ ಸದ್ಯ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಸುಕೇಶ್ ಚಂದ್ರಶೇಖರ್ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್
ಸುಕೇಶ್ ಚಂದ್ರಶೇಖರ್ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್

ನವದೆಹಲಿ: ಸದ್ಯ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್, ಪಾಪ್ ಗಾಯಕ ಮಿಕಾ ಸಿಂಗ್ ಅವರಿಗೆ ಕಳುಹಿಸಲಾದ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬೆಲ್ಜಿಯಂನ ಖ್ಯಾತ ಮಾರ್ಷಲ್ ಆರ್ಟಿಸ್ಟ್ ಜೀನ್-ಕ್ಲೌಡ್ ವ್ಯಾನ್ ಡ್ಯಾಮ್ ಅವರೊಂದಿಗಿರುವ ಫೋಟೊವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ ಮಿಕಾ ಸಿಂಗ್ ಕಾಮೆಂಟ್ ಮಾಡಿದ ನಂತರ ಸುಕೇಶ್ ಎಚ್ಚರಿಕೆ ನೀಡಿದ್ದಾರೆ.

'ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ.. ಆತ ಸುಕೇಶ್‌ಗಿಂತ ಉತ್ತಮವಾಗಿದ್ದೀರಿ..' ಎಂದು ಮಿಕಾ ಕಮೆಂಟ್ ಮಾಡಿದ್ದರು. ಇದು ವೈರಲ್ ಆಗುವ ವೇಳೆಗೆ ಮಿಕಾ ಅವರು ತಮ್ಮ ಕಮೆಂಟ್ ಅನ್ನು ಡಿಲೀಟ್ ಮಾಡಿದ್ದರು. 

ಈ ಕಮೆಂಟ್‌ಗೆ ಪ್ರತಿಕ್ರಿಯೆಯಾಗಿ, ಸದ್ಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್, ತಮ್ಮ ವಕೀಲರಾದ ಅನಂತ್ ಮಲಿಕ್ ಅವರ ಮೂಲಕ ತಮ್ಮ ಪತ್ರವನ್ನು ಸಾರ್ವಜನಿಕಗೊಳಿಸಿ, ಕಮೆಂಟ್‌ಗೆ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಾರೆ.

ಪತ್ರದಲ್ಲಿ, ಮಿಕಾ ಅವರನ್ನು 'ಕೆಟ್ಟ ವ್ಯಕ್ತಿ' ಎಂದು ಉಲ್ಲೇಖಿಸಿರುವ ಸುಕೇಶ್, ನಟಿ ಜಾಕ್ವೆಲಿನ್ ಅವರ ಜೀವನದಲ್ಲಿ ಮಿಕಾ ಅವರ ಹಸ್ತಕ್ಷೇಪವನ್ನು ಖಂಡಿಸಿದ್ದಾರೆ.

'ಮಿಕಾ, ನೀವು ಏನನ್ನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ನಾನು ನೋಡುತ್ತಿದ್ದೇನೆ. ಜಾಕ್ವೆಲಿನ್‌ಗೆ ಯಾವುದು ಒಳ್ಳೆಯದು ಎಂಬುದರ ಕುರಿತು ನೀವು ಕಮೆಂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ. ನಿಮ್ಮ ಕಮೆಂಟ್ ಬಗ್ಗೆ ನನಗೆ ತಿಳಿಯಿತು. ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ. ನೀವೇನು ಒಳ್ಳೆಯವರಲ್ಲ ಏಕೆಂದರೆ, ನಿಮ್ಮ ಬಗ್ಗೆ ನಾನು ಮರೆಮಾಡುವುದಕ್ಕೆ ಏನೂ ಇಲ್ಲ. ಏಕೆಂದರೆ, ಎಲ್ಲವೂ ಎಲ್ಲರಿಗೂ ತಿಳಿದಿದೆ. ಆದರೆ, ನಿಮ್ಮ ಬಳಿ ಬಹಳಷ್ಟು ಕಸವಿದೆ. ವಿಶೇಷವಾಗಿ ಮಹಿಳೆಯರೊಂದಿಗೆ ನಿಮ್ಮ ನಡವಳಿಕೆಯ ವಿಚಾರದಲ್ಲಿ' ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದಾರೆ.

ಹೀಗಾಗಿ, 'ಮಿಕಾ' ಅವರೇ ನಿಮ್ಮ ಗೌರವ ಮತ್ತು ಘನತೆಯನ್ನು ಕಾಪಾಡಿಕೊಳ್ಳುವುದು ಉತ್ತಮ ಮತ್ತು ನಿಮ್ಮದೇ ಭಯಾನಕವಾಗಿ ಗಬ್ಬು ನಾರುತ್ತಿರುವಾಗ ಇತರರ ಜೀವನದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸುವುದು ಉತ್ತಮ. ನಿಮ್ಮ ವಿರುದ್ಧದ ಹಲವಾರು ಕಾನೂನು ಮೊಕದ್ದಮೆಗಳು ನಿಮ್ಮನ್ನು ದಿವಾಳಿ ಮಾಡುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.

'ಹಾಗೆಯೇ, ಎಲ್ಲಾ ಅದ್ಭುತ ಟ್ರೋಲರ್‌ಗಳಿಗೆ, ಸ್ಕಾರ್ಫೇಸ್ (Scarface) ಚಿತ್ರದ ಹಳೆಯ ಸಾಲನ್ನು ಉಲ್ಲೇಖಿಸಲು ಬಯಸುತ್ತೇನೆ. 'ನೀವೆಲ್ಲರೂ ಜಿರಳೆಗಳ ಗುಂಪಾಗಿದ್ದೀರಿ ಮತ್ತು ನೋಡಿ, ಅವನು 'ಕೆಟ್ಟ ವ್ಯಕ್ತಿ' ಎಂದು ಹೇಳಲು ಮತ್ತು ಯಾರೊಬ್ಬರನ್ನೋ ಗುರಿಯಾಗಿಸಲು ನಿಮಗೆ ನನ್ನಂತಹ ಜನರು ಬೇಕು. ನಿಮಗೆ ಹೇಗೆ ಮರೆಮಾಚುವುದು, ದ್ವೇಷ, ನಕಾರಾತ್ಮಕತೆಯನ್ನು ಹರಡುವುದು ಮತ್ತು ಅಸೂಯೆ ಮಾಡಿಸುವುದು ಹೇಗೆಂದು ತಿಳಿದಿದೆ' ಎಂದು ಸುಕೇಶ್ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ನಾನು ನಿಮ್ಮಂತೆ ಅಲ್ಲ. ಏಕೆಂದರೆ, ನಾನೇನು ಮಾಡುತ್ತಿದ್ದೇನೆ ಮತ್ತು ಮಾಡಿದ್ದೇನೆ ಎಂಬುದೆಲ್ಲವೂ ಪಾರದರ್ಶಕ ಮತ್ತು ಮುಕ್ತವಾಗಿದೆ. ನಾನು ಅದಕ್ಕೆ ಬದ್ಧವಾಗಿದ್ದೇನೆ. ಅದರಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸುವ ಧೈರ್ಯ ನನಗಿದೆ. ಇತರರ ಅಭಿಪ್ರಾಯ ಅಥವಾ ಫಲಿತಾಂಶದ ಬಗ್ಗೆ ನನಗೆ ಭಯವಿಲ್ಲ. ಮೂಲಭೂತವಾಗಿ ನಾನು ಅಂತವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

'ಕೊನೆಯದಾಗಿ, ಜಾಕಿ (ಜಾಕ್ವೆಲಿನ್) ನನ್ನ ಬೇಬಿ ಬೊಂಬೆ, ನಾನು ನಿನ್ನನ್ನು ಹುಚ್ಚನಂತೆ ಪ್ರೀತಿಸುತ್ತೇನೆ. ಈ ಎಲ್ಲಾ ನಕಾರಾತ್ಮಕತೆಗಳ ಬಗ್ಗೆ ಚಿಂತಿಸಬೇಡ ನಾನಿದ್ದೇನೆ ಮತ್ತು ಅದನ್ನು ನಿಭಾಯಿಸುತ್ತೇನೆ. ಅಂತಿಮವಾಗಿ, ಸಕಾರಾತ್ಮಕ ಫಲಿತಾಂಶವು ಮೇಲುಗೈ ಸಾಧಿಸುತ್ತದೆ. ನನ್ನ ರಾಕ್‌ಸ್ಟಾರ್, ನಿನ್ನನ್ನು ಹುಚ್ಚನಂತೆ ಮಿಸ್ ಮಾಡಿಕೊಂಡಿದ್ದೇನೆ, ಕಾಯಲು ಸಾಧ್ಯವಿಲ್ಲ' ಎಂದು ವ್ಯಾನ್ ಡ್ಯಾಮ್ ಅವರೊಂದಿಗಿನ ಮುಂಬರುವ ಹಾಲಿವುಡ್ ಸಿನಿಮಾಗಾಗಿ ಜಾಕ್ವೆಲಿನ್‌ಗೆ ಅಭಿನಂದನೆ ಸಲ್ಲಿಸುವ ಮೂಲಕ ಪತ್ರ ಕೊನೆಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com