ದೇಶ

ಆಗ್ರಾ: ಪಾತಾಳಕೋಟ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ; ಹಲವರಿಗೆ ಸುಟ್ಟ ಗಾಯ!

ಆಗ್ರಾ: ಪಾತಾಳಕೋಟ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ; ಹಲವರಿಗೆ ಸುಟ್ಟ ಗಾಯ!
ಪಾತಾಳಕೋಟ್ ಎಕ್ಸ್ ಪ್ರೆಸ್
Published On :

ಆಗ್ರಾ ಕ್ಯಾಂಟ್‌ನಿಂದ ಗ್ವಾಲಿಯರ್ ಕಡೆಗೆ ಚಲಿಸುತ್ತಿದ್ದ ಪಾತಾಳಕೋಟ್ ಎಕ್ಸ್‌ಪ್ರೆಸ್ ನ ಸಾಮಾನ್ಯ ಬೋಗಿಗಳಲ್ಲಿ ಬುಧವಾರ ಮಧ್ಯಾಹ್ನ ಹಠಾತ್ ಲೈಟ್‌ಗಳು ಸಿಡಿದ ಕಾರಣ ಬೆಂಕಿ ಕಾಣಿಸಿಕೊಂಡಿದೆ. ಕ್ಯಾಂಟ್‌ನಿಂದ ಸುಮಾರು 8 ಕಿಮೀ ದೂರದಲ್ಲಿರುವ ಭಂಡೈ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದ ನಂತರ ಪ್ರಯಾಣಿಕರು ಭಯಭೀತರಾಗಿದ್ದರು. 

ಸದ್ದು ಕೇಳಿದ ಪ್ರಯಾಣಿಕರೊಬ್ಬರು ಚೈನ್ ಎಳೆದಿದ್ದಾರೆ. ಕೆಲವು ಪ್ರಯಾಣಿಕರು ಬೋಗಿಯಿಂದ ಕೆಳಗೆ ಹಾರಿದರೆ, ಉಳಿದ ಪ್ರಯಾಣಿಕರನ್ನು ರೈಲು ನಿಂತ ತಕ್ಷಣ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಘಟನೆಯಲ್ಲಿ ಎರಡು ಕೋಚ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಎರಡು ಬೋಗಿಗಳು ಭಾಗಶಃ ಸುಟ್ಟು ಕರಕಲಾಗಿವೆ. 

ಏಳು ಪ್ರಯಾಣಿಕರು ಸುಟ್ಟು ಗಾಯಗೊಂಡಿದ್ದು, ಎಸ್‌ಎನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಡಿಆರ್‌ಎಂ ತನಿಖೆಗೆ ಆದೇಶಿಸಿದ್ದಾರೆ. ಅಪಘಾತದಿಂದಾಗಿ ವಂದೇ ಭಾರತ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. 

ಪಂಜಾಬ್‌ನ ಫಿರೋಜ್‌ಪುರದಿಂದ ಮಧ್ಯಪ್ರದೇಶದ ಸಿಯೋನಿಗೆ ಚಲಿಸುವ ಪಾತಾಳಕೋಟ್ ಎಕ್ಸ್‌ಪ್ರೆಸ್ ಬುಧವಾರ ಮಧ್ಯಾಹ್ನ 3.13ಕ್ಕೆ ಆಗ್ರಾ ಕ್ಯಾಂಟ್ ನಿಲ್ದಾಣವನ್ನು ತಲುಪಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಎಂಜಿನ್ ನಂತರ ಏಳು ಸಾಮಾನ್ಯ ಬೋಗಿಗಳು ಇದ್ದವು. ನಾಲ್ಕನೇ ಬೋಗಿಯ ದೀಪಗಳು ಇದ್ದಕ್ಕಿದ್ದಂತೆ ಶಬ್ದದಿಂದ ಸಿಡಿಯಲು ಪ್ರಾರಂಭಿಸಿದಾಗ ರೈಲು ವೇಗವನ್ನು ಪಡೆಯುತ್ತಿತ್ತು. ಇದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.