ದೆಹಲಿ: 2 ಅಂತಸ್ತಿನ ಕಟ್ಟಡ ಕುಸಿತ: ಇಬ್ಬರ ಸಾವು, ಓರ್ವನಿಗೆ ಗಂಭೀರ ಗಾಯ

ಎರಡು ಅಂತಸ್ತಿನ ಹಳೆಯ ಕಟ್ಟಡ ಕುಸಿದ ಪರಿಣಾಮ ಇಬ್ಬರು ಕಾಮಿರ್ಕರು ಮೃತಪಟ್ಟು, ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ದೆಹಲಿಯ ಕಬೀರ್‌ ನಗರದಲ್ಲಿ ಗುರುವಾರ ನಡೆದಿದೆ.
ಕಟ್ಟಡ ಕುಸಿತಗೊಂಡಿರುವುದು.
ಕಟ್ಟಡ ಕುಸಿತಗೊಂಡಿರುವುದು.
Updated on: 

ನವದೆಹಲಿ: ಎರಡು ಅಂತಸ್ತಿನ ಹಳೆಯ ಕಟ್ಟಡ ಕುಸಿದ ಪರಿಣಾಮ ಇಬ್ಬರು ಕಾಮಿರ್ಕರು ಮೃತಪಟ್ಟು, ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ದೆಹಲಿಯ ಕಬೀರ್‌ ನಗರದಲ್ಲಿ ಗುರುವಾರ ನಡೆದಿದೆ.

ಮೃತ ಕಾರ್ಮಿಕರನ್ನು ಅರ್ಷದ್ (30) ಮತ್ತು ತೌಹಿತ್‌ (20) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಕಾರ್ಮಿಕ ರೆಹಾನ್ (22) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಈಶಾನ್ಯ ಡಿಸಿಪಿ ಜಾಯ್ ಟಿರ್ಕಿ, ನಡುರಾತ್ರಿ ಕಟ್ಟಡ ಕುಸಿತದ ಬಗ್ಗೆ ನಮಗೆ ಕರೆ ಬರುತ್ತಿದ್ದಂತೆ, ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೂರು ಮಂದಿಯನ್ನು ಹೊರಕ್ಕೆ ತೆಗೆಯಲಾಯಿತು.

ಕಟ್ಟಡ ಕುಸಿತಗೊಂಡಿರುವುದು.
ಮಹಾರಾಷ್ಟ್ರದ ಭಿವಂಡಿಯಲ್ಲಿ ಕಟ್ಟಡ ಕುಸಿತ, ಸಾವಿನ ಸಂಖ್ಯೆ 3ಕ್ಕೆ ಏರಿಕೆ

ತಕ್ಷಣ ಮೂವರನ್ನೂ ಜಿಟಿಬಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಿದೆ ಅರ್ಷದ್ ಮತ್ತು ತೌಹಿದ್ ಎಂಬ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೋರ್ವ ರೆಹಾನ್ ಎಂಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಕುಸಿದಿರುವ ಕಟ್ಟಡದ ಮಾಲೀಕನನ್ನು ಶಾಹಿದ್ ಎಂದು ಗುರುತಿಸಲಾಗಿದ್ದು, ಆತನ ಪತ್ತೆಯಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com