ದೇಶ

ಕುರ್ಕುರೆ ಪ್ಯಾಕೆಟ್ ತಂದು ಕೊಡದ್ದಕ್ಕೆ ಮುನಿಸಿಕೊಂಡ ಪತ್ನಿ: ತವರು ಮನೆಯಿಂದ ಪತಿಗೆ ಡಿವೋರ್ಸ್​​ ನೊಟೀಸ್

ಪತಿ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದು ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತ್ನಿ ಮುನಿಸಿಕೊಂಡು ತನ್ನ ತವರಿಗೆ ಹೋಗಿದ್ದಾಳೆ. ಒಂದೂವರೆ ತಿಂಗಳಿನಿಂದ ತಂದೆ ಮನೆಯಲ್ಲಿ ವಾಸವಾಗಿದ್ದಾಳೆ. ಬಳಿಕ ಅಲ್ಲಿಂದಲೇ ಪತಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾಳೆ.

ಕುರ್ಕುರೆ ಪ್ಯಾಕೆಟ್ ತಂದು ಕೊಡದ್ದಕ್ಕೆ ಮುನಿಸಿಕೊಂಡ ಪತ್ನಿ: ತವರು ಮನೆಯಿಂದ ಪತಿಗೆ ಡಿವೋರ್ಸ್​​ ನೊಟೀಸ್
ಸಾಂದರ್ಭಿತಕ ಚಿತ್ರ
Published On :

ಉತ್ತರ ಪ್ರದೇಶ: ಪತಿ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದು ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತ್ನಿ ಮುನಿಸಿಕೊಂಡು ತನ್ನ ತವರಿಗೆ ಹೋಗಿದ್ದಾಳೆ. ಒಂದೂವರೆ ತಿಂಗಳಿನಿಂದ ತಂದೆ ಮನೆಯಲ್ಲಿ ವಾಸವಾಗಿದ್ದಾಳೆ. ಬಳಿಕ ಅಲ್ಲಿಂದಲೇ ಪತಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾಳೆ.

ನಂತರ ಇಬ್ಬರೂ ಸಹ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲಿ ಪತ್ನಿ ತನ್ನ ಪತಿಯಿಂದ ದೈಹಿಕ ಕಿರುಕುಳ ಅನುಭವಿಸುತ್ತಿದ್ದೇನೆ ಅದಕ್ಕೆ ನಾನು ಆತನ ಮನೆಯನ್ನು ತೊರೆದಿದ್ದೇನೆ ಎಂದು ಹೇಳಿದ್ದಾಳೆ. ಅತ್ತ ಗಂಡನು ಪೊಲೀಸರ ಬಳಿ ತನ್ನ ಪತಿ ದಿನಾಲೂ ಕುರ್ಕುರೆಗೆ ಡಿಮ್ಯಾಂಡ್​ ಮಾಡುತ್ತಾಳೆ. ದಿನನಿತ್ಯದ ತಿಂಡಿಗೆ ಬೇಡಿಕೆ ಇಡುತ್ತಾಳೆ ಎಂದು ದೂರಿದ್ದಾನೆ. ನಂತರ ಪೊಲೀಸರು ಈ ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ ನೀಡಿದ್ದಾರೆ.

ಬಳಿಕ ಇಬ್ಬರ ದೂರನ್ನು ಆಲಿಸಿದಾಗ ಪತ್ನಿಗೆ ಕುರ್ಕುರೆ ಮೇಲೆ ಅತಿಯಾದ ಒಲವು ಎಂಬುದು ತಿಳಿದು ಬಂದಿದೆ. ಆದರೆ ಪತಿ ಮಾತ್ರ ಇದನ್ನು ದಿನನಿತ್ಯ ತರಲು ಹಿಂದೇಟು ಹಾಕುತ್ತಿದ್ದ. ಇದೇ ಕಾರಣಕ್ಕೆ ಪತ್ನಿ ತನ್ನ ಪತಿಯ ಮನೆಯನ್ನು ತೊರೆದಿದ್ದಾಳೆ ಎಂದು ಗಮನಕ್ಕೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.