'ಐ ಲವ್ ಯೂ' ಅಂತ ಹೇಳುವುದು ಭಾವನೆಗಳ ಅಭಿವ್ಯಕ್ತಿಯಷ್ಟೆ, ಲೈಂಗಿಕ ಉದ್ದೇಶ ಇರಬೇಕೆಂದಿಲ್ಲ: ಬಾಂಬೆ ಹೈಕೋರ್ಟ್

ದೂರಿನ ಪ್ರಕಾರ, ಆ ವ್ಯಕ್ತಿ ನಾಗ್ಪುರದಲ್ಲಿ 17 ವರ್ಷದ ಸಂತ್ರಸ್ತೆಯನ್ನು ತಡೆದು, ಆಕೆಯ ಕೈ ಹಿಡಿದು 'ಐ ಲವ್ ಯೂ' ಎಂದು ಹೇಳಿದ್ದ.
Representative image
ಸಾಂದರ್ಭಿಕ ಚಿತ್ರ
Updated on

ಮುಂಬೈ: 'ಐ ಲವ್ ಯು' ಎಂದು ಹೇಳುವುದು ಕೇವಲ ಭಾವನೆಗಳ ಅಭಿವ್ಯಕ್ತಿಯಾಗಿದೆ ಮತ್ತು ಅದು 'ಲೈಂಗಿಕ ಉದ್ದೇಶ' ಹೊಂದಿರುವುದಕ್ಕೆ ಸಮನಾಗುವುದಿಲ್ಲ ಎಂದಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು, 2015ರಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ 35 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

ಯಾವುದೇ ಲೈಂಗಿಕ ಕಿರುಕುಳದಲ್ಲಿ ಅನುಚಿತ ಸ್ಪರ್ಶ, ಬಲವಂತವಾಗಿ ಬಟ್ಟೆ ಕಳಚುವುದು, ಅಸಭ್ಯ ಸನ್ನೆಗಳು ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಟೀಕೆಗಳು ಸೇರಿರುತ್ತವೆ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರಿದ್ದ ಪೀಠ ಸೋಮವಾರ ನೀಡಿದ ಆದೇಶದಲ್ಲಿ ತಿಳಿಸಿದೆ.

ದೂರಿನ ಪ್ರಕಾರ, ಆ ವ್ಯಕ್ತಿ ನಾಗ್ಪುರದಲ್ಲಿ 17 ವರ್ಷದ ಸಂತ್ರಸ್ತೆಯನ್ನು ತಡೆದು, ಆಕೆಯ ಕೈ ಹಿಡಿದು 'ಐ ಲವ್ ಯೂ' ಎಂದು ಹೇಳಿದ್ದ.

2017ರಲ್ಲಿ ನಾಗ್ಪುರದ ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನನ್ನು ದೋಷಿ ಎಂದು ತೀರ್ಪು ನೀಡಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಸಂತ್ರಸ್ತೆಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುವುದು ಆತನ ನಿಜವಾದ ಉದ್ದೇಶ ಎಂಬುದನ್ನು ಸೂಚಿಸಲು ಯಾವುದೇ ಪುರಾವೆಯಿಲ್ಲ ಎಂದು ಹೇಳಿದ ಹೈಕೋರ್ಟ್, ಆ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸಿತು.

Representative image
Live-in Relationship ಸಮಾಜದ ಮೌಲ್ಯಗಳಿಗೆ ವಿರುದ್ಧ, ಮಹಿಳೆಯರ ಜೀವನ ದುಸ್ತರವಾಗುತ್ತದೆ: ಅಲಹಾಬಾದ್ ಹೈಕೋರ್ಟ್

'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳಿದ ಪದಗಳು ಶಾಸಕಾಂಗವು ಯೋಚಿಸಿದಂತೆ ಲೈಂಗಿಕ ಉದ್ದೇಶಕ್ಕೆ ಸಮನಾಗಿರುವುದಿಲ್ಲ. ಲೈಂಗಿಕತೆಯೇ ಇದರ ಹಿಂದಿನ ನಿಜವಾದ ಉದ್ದೇಶ ಎಂಬುದನ್ನು ಸೂಚಿಸಲು ಇನ್ನೂ ಹೆಚ್ಚಿನ ಏನಾದರೂ ಇರಬೇಕು' ಎಂದು ನ್ಯಾಯಾಲಯ ಹೇಳಿದೆ.

ಪ್ರಾಸಿಕ್ಯೂಷನ್ ಪ್ರಕಾರ, ಹುಡುಗಿ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಆ ವ್ಯಕ್ತಿ ಆಕೆಯ ಕೈ ಹಿಡಿದು, ಆಕೆಯ ಹೆಸರು ಕೇಳಿದ್ದಾನೆ. ಬಳಿಕ 'ಐ ಲವ್ ಯೂ' ಎಂದು ಹೇಳಿದ್ದಾನೆ. ಕೂಡಲೇ ಹುಡುಗಿ ಅಲ್ಲಿಂದ ಹೊರಟು ಮನೆಗೆ ಹೋಗಿದ್ದಾಳೆ ಮತ್ತು ತನ್ನ ತಂದೆಗೆ ಘಟನೆಯ ಬಗ್ಗೆ ಹೇಳಿದ್ದಾಳೆ. ಬಳಿಕ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಈ ಪ್ರಕರಣವು ಕಿರುಕುಳ ಅಥವಾ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುವುದಿಲ್ಲ. ಯಾವುದೇ ಲೈಂಗಿಕ ಕಿರುಕುಳದಲ್ಲಿ ಅನುಚಿತ ಸ್ಪರ್ಶ, ಬಲವಂತವಾಗಿ ವಸ್ತ್ರ ಕಳಚುವಿಕೆ, ಅಸಭ್ಯ ಸನ್ನೆಗಳು ಅಥವಾ ಮಹಿಳೆಯ ಘನತೆಯನ್ನು ಅವಮಾನಿಸುವ ಉದ್ದೇಶದಿಂದ ನೀಡಿದ ಹೇಳಿಕೆಗಳು ಸೇರಿವೆ ಎಂದು ಹೈಕೋರ್ಟ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com