ತಾಯಿ, ಆಕೆಯ ಪ್ರೇಮಿಯನ್ನು ಜೊತೆಯಾಗಿ ನೋಡಿದ ಪುತ್ರ; ಇಬ್ಬರನ್ನೂ ಕೊಂದು, ಶವದೊಂದಿಗೆ ಠಾಣೆಗೆ ಬಂದ!

ತಾಯಿ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ನೋಡಿದ ಮಗ, ತನ್ನ ಹೆಂಡತಿಯನ್ನು ಎಬ್ಬಿಸಿದ್ದಾನೆ. ನಂತರ ದಂಪತಿಗಳಿಬ್ಬರೂ ಸೇರಿ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
Man finds mom, 'lover' in compromising position; kills both
ಸಾಂದರ್ಭಿಕ ಚಿತ್ರ
Updated on: 

ಸಿರ್ಸಾ: ತನ್ನ ತಾಯಿ ಮತ್ತು ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ನೆರೆಹೊರೆಯ ವ್ಯಕ್ತಿ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ನೋಡಿ ಆಕ್ರೋಶಗೊಂಡ ಮಗ ಇಬ್ಬರನ್ನೂ ಕೊಂದು, ಅವರ ಶವಗಳೊಂದಿಗೆ ಶನಿವಾರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣದ ಸಿರ್ಸಾದ ಹಳ್ಳಿಯೊಂದರಲ್ಲಿ ಗುರುವಾರ ಮತ್ತು ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ರಾಜ್ ಕುಮಾರ್ ತನ್ನ ತಾಯಿ(ಸುಮಾರು 45 ವರ್ಷ) ಮತ್ತು ಅವರ ನೆರೆಹೊರೆಯ ವ್ಯಕ್ತಿ(ಸುಮಾರು 48 ವರ್ಷ) ತನ್ನ ಮನೆಯೊಳಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ನೋಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಯಿ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ನೋಡಿದ ಮಗ, ತನ್ನ ಹೆಂಡತಿಯನ್ನು ಎಬ್ಬಿಸಿದ್ದಾನೆ. ನಂತರ ದಂಪತಿಗಳಿಬ್ಬರೂ ಸೇರಿ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಸಿರ್ಸಾ ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಲೇಖರಾಜ್ ಹೇಳಿದ್ದಾರೆ.

Man finds mom, 'lover' in compromising position; kills both
ಬೆಂಗಳೂರು: ಪ್ರಿಯಕರನ ಜೊತೆಗೂಡಿ ಪತಿ ಕೊಲೆ; ಪತ್ನಿ ಸೇರಿ ಮೂವರ ಬಂಧನ

ಶುಕ್ರವಾರ, ಕುಮಾರ್, ಇಬ್ಬರ ಶವಗಳನ್ನು ತನ್ನ ಪಿಕಪ್ ಜೀಪಿನಲ್ಲಿ ಇರಿಸಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಅಲ್ಲಿ ಅವರು ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡರು. ಕಳೆದ ಕೆಲವು ವರ್ಷಗಳಿಂದ ತನ್ನ ತಾಯಿ ತಮ್ಮ ನೆರೆಹೊರೆಯ ವ್ಯಕ್ತಿ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ.

ನಂತರ ಆರೋಪಿಯ ಪತ್ನಿಯನ್ನು ಸಂಬಂಧಿಕರೊಬ್ಬರು ಪೊಲೀಸ್ ಠಾಣೆಗೆ ಕರೆತಂದರು ಎಂದು ಸಬ್-ಇನ್ಸ್‌ಪೆಕ್ಟರ್ ಲೇಖರಾಜ್ ಹೇಳಿದ್ದಾರೆ.

ಕುಮಾರ್ ಮತ್ತು ಅವರ ಪತ್ನಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com