ಬಿಜೆಪಿ ಪಕ್ಷವಲ್ಲ, ಅದೊಂದು ಬಕಾಸುರರ ಗ್ಯಾಂಗ್; ರಾಘವ್ ಚಡ್ಡಾಗೆ ಶೀಘ್ರದಲ್ಲೇ ನರಕಕ್ಕೆ ಕಾಲಿಟ್ಟಿರುವ ಅನುಭವ: ಸಂಜಯ್ ರಾವತ್

ಬಿಜೆಪಿಯನ್ನು 'ನಾಚಿಕೆಯಿಲ್ಲದ' ಪಕ್ಷ ಎಂದು ಕರೆದಿರುವ ಅವರು, ಎಂದಿಗೂ ಹಸಿವು ನೀಗದ ಪೌರಾಣಿಕ ರಾಕ್ಷಸ 'ಬಕಾಸುರ'ನಿಗೆ ಹೋಲಿಸಿದ್ದಾರೆ
Sanjay Raut
ಸಂಜಯ್ ರಾವತ್
Updated on

ಮುಂಬಯಿ: ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು 'ನಾಚಿಕೆಗೇಡಿ' ಮತ್ತು 'ಬಕಾಸುರ' ರಾಕ್ಷಸನಿಗೆ ಹೋಲಿಸಿರುವ ಅವರು, ಪಕ್ಷಾಂತರಿಗಳು 'ಗೂಂಡಾಗಳ ಪಕ್ಷ' ಸೇರಿದ್ದಾರೆ ರಾಘವ್ ಚಡ್ಡಾ ವಿರುದ್ಧವೂ ಕಿಡಿ ಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವತ್, ಆಮ್ ಆದ್ಮಿ ಪಕ್ಷದಿಂದ ಬಿಜೆಪಿಗೆ ಹಾರಿದ ರಾಘವ್ ಚಡ್ಡಾ ಮತ್ತು ಇತರ ಇಬ್ಬರು ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯನ್ನು 'ನಾಚಿಕೆಯಿಲ್ಲದ' ಪಕ್ಷ ಎಂದು ಕರೆದಿರುವ ಅವರು, ಎಂದಿಗೂ ಹಸಿವು ನೀಗದ ಪೌರಾಣಿಕ ರಾಕ್ಷಸ 'ಬಕಾಸುರ'ನಿಗೆ ಹೋಲಿಸಿದ್ದಾರೆ. ಮಹಾಭಾರತದಲ್ಲಿ ಬಕಾಸುರ ಎಂಬ ರಾಕ್ಷಸನಿದ್ದಾನೆ. ಅವನ ಹಸಿವು ಎಂದಿಗೂ ನೀಗುವುದಿಲ್ಲ, ಹೊಟ್ಟೆ ತುಂಬುವುದೇ ಇಲ್ಲ ಅದೇ ರೀತಿ ಬಿಜೆಪಿ ಕೂಡ ಬಕಾಸುನಿದ್ದಂತೆ ಎಂದು ಹೇಳಿದರು.

ಪಕ್ಷಾಂತರಿಗಳು ಗೂಂಡಾಗಳ ಮತ್ತು ಭ್ರಷ್ಟರ ಪಕ್ಷ ಸೇರಿದ್ದಾರೆ. ಬಿಜೆಪಿ ಯಾವ ರೀತಿಯ ರಾಜಕೀಯ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ರಾಜಕೀಯವನ್ನು ಒಂದೇ ಪದದಲ್ಲಿ ಹೇಳಬೇಕೆಂದರೆ, ಅದು 'ನಾಚಿಕೆಗೇಡಿತನ'.

Sanjay Raut
ರಾಘವ್ ಚಡ್ಡಾ ಬಿಜೆಪಿಯ 'ಟೂಲ್'; ಪಕ್ಷ ಒಡೆಯಲು ಯತ್ನ: ಎಎಪಿ

ಅವರಿಗೆ ಯಾವುದೇ ನಾಚಿಕೆ ಇಲ್ಲ. ನಿನ್ನೆಯವರೆಗೂ ನಮ್ಮ ಸ್ನೇಹಿತರಾಗಿದ್ದ ರಾಘವ್ ಚಡ್ಡಾ ಅವರಂತಹ ನಾಯಕರು, ಬಿಜೆಪಿ ಗೂಂಡಾಗಳ, ಪುಂಡರ ಮತ್ತು ಭ್ರಷ್ಟರ ಪಕ್ಷ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಈಗ ಅವರೆಲ್ಲರೂ ಅದೇ ಗೂಂಡಾಗಳ ಮತ್ತು ಭ್ರಷ್ಟರ ಪಕ್ಷವನ್ನು ಸೇರಿಕೊಂಡಿದ್ದಾರೆ.

ಬಿಜೆಪಿ ಈಗ ಬಕಾಸುರರ ಪಕ್ಷವಾಗಿ ಮಾರ್ಪಟ್ಟಿದೆ. ಅವರು ಸಿಕ್ಕಿದ್ದನ್ನೆಲ್ಲಾ ತಿಂದು ತೇಗುತ್ತಾರೆ. ರಾಘವ್ ಚಡ್ಡಾ ಅವರಂತಹ ಏಳು ಮಂದಿ ಆ ನರಕದಂತಹ ಪಕ್ಷಕ್ಕೆ ಸೇರಿದ್ದಾರೆ. ಅದರ ಬಗ್ಗೆ ನಮಗೆ ಯಾವುದೇ ವಿಷಾದವಿಲ್ಲ. ನರಕ ಹೇಗಿರುತ್ತದೆ ಎಂಬುದು ಅವರಿಗೆ ಶೀಘ್ರದಲ್ಲೇ ತಿಳಿಯಲಿದೆ.

ಇದರಿಂದ ವಿರೋಧ ಪಕ್ಷ ಎಂದಿಗೂ ದುರ್ಬಲವಾಗುವುದಿಲ್ಲ. ಪಕ್ಷ ತೊರೆದ ಈ ಆರು-ಏಳು ಮಂದಿ ಜನಸಾಮಾನ್ಯರ ನಾಯಕರಲ್ಲ. ಅವರು ಹೆಚ್ಚೆಂದರೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಪೇಜ್ 3 ನಾಯಕರು ಅಷ್ಟೇ ಎಂದು ರಾವತ್ ಕಿಡಿಕಾರಿದ್ದಾರೆ.

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಸ್ಥಾನದಿಂದ ತೆಗೆದುಹಾಕಲ್ಪಟ್ಟಿದ್ದ ಚಡ್ಡಾ ಶುಕ್ರವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಡ್ಡಾ, ವಾರಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com