ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸಿದೇ ಸಂಜೆ ಶಾಲೆ ಆವರಣಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ, ತಮ್ಮ ಚುನಾವಣಾ ಏಜೆಂಟ್‌ ಜೊತೆಗೆ ಸ್ಟ್ರಾಂಗ್ ರೂಮ್ ಒಳಗೆ ಕೆಲಹೊತ್ತು ಇದ್ದರು.
CM Mamata Banerjee
ಸಿಎಂ ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಕೋಲ್ಕತ್ತಾದ ಸಖಾವತ್ ಮೆಮೋರಿಯಲ್ ಶಾಲೆಯಲ್ಲಿನ ಭಬಾನಿಪುರ ವಿಧಾನಸಭಾ ಕ್ಷೇತ್ರದ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದರು ವಿದ್ಯುನ್ಮಾನ ಮತ ಯಂತ್ರಗಳ (EVM) ಟ್ಯಾಂಪರಿಂಗ್ ಆರೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸಿದೇ ಸಂಜೆ ಶಾಲೆ ಆವರಣಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ, ತಮ್ಮ ಚುನಾವಣಾ ಏಜೆಂಟ್‌ ಜೊತೆಗೆ ಸ್ಟ್ರಾಂಗ್ ರೂಮ್ ಒಳಗೆ ಕೆಲಹೊತ್ತು ಇದ್ದರು. ಕೋಲ್ಕತ್ತಾ ಮೇಯರ್ ಮತ್ತು ಕೋಲ್ಕತ್ತಾ ಬಂದರು ವಿಭಾಗದ ಟಿಎಂಸಿ ಅಭ್ಯರ್ಥಿ ಫಿರ್ಹಾದ್ ಹಕೀಮ್ ಸಹ ಸ್ಥಳಕ್ಕೆ ತಲುಪಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹಕೀಮ್, ಮುಖ್ಯಮಂತ್ರಿ ಆಗಮಿಸಿದ್ದಾರೆಂದು ತಿಳಿದ ನಂತರ ನಾನು ಇಲ್ಲಿಗೆ ಬಂದೆ. ಆದರೆ ಅವರು ಅಭ್ಯರ್ಥಿಯಾಗಿ ಸ್ಟ್ರಾಂಗ್ ರೂಮ್‌ಗಳಿಗೆ ಭೇಟಿ ನೀಡುವ ಹಕ್ಕನ್ನು ಚಲಾಯಿಸಿದ್ದರಿಂದ ನಾನು ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನನಗೆ ಅಲ್ಲಿಗೆ ತೆರಳಲು ಅವಕಾಶವಿರಲಿಲ್ಲ. ಒಳಗೆ ನಿಖರವಾಗಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ ಎಂದರು.

ಈ ಮಧ್ಯೆ ಉತ್ತರ ಕೋಲ್ಕತ್ತಾದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ. ಟಿಎಂಸಿ ಅಭ್ಯರ್ಥಿಗಳಾದ ಕುನಾಲ್ ಘೋಷ್ ಮತ್ತು ಶಶಿ ಪಂಜಾ ಅವರು ಖುದಿರಾಮ್ ಅನುಶೀಲನ ಕೇಂದ್ರದ ಹೊರಗೆ ಧರಣಿ ನಡೆಸಿ, ಇವಿಎಂಗಳ ಸಂಗ್ರಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆಗೆ ಕಾರಣವಾಯಿತು.

ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಮತಗಟ್ಟೆ ಏಜೆಂಟ್‌ಗಳ ಇವಿಎಂ ಸ್ಟ್ರಾಂಗ್ ರೂಮ್‌ಗಳ ಮೇಲೆ 24/7 ನಿಗಾ ಇಡುವಂತೆ ಇಂದು ಬೆಳಿಗ್ಗೆ, ಬ್ಯಾನರ್ಜಿ ವಿಡಿಯೋ ಸಂದೇಶದಲ್ಲಿ ಒತ್ತಾಯಿಸಿದ್ದರು. ಮೇ 4 ರಂದು ನಿಗದಿಯಾಗಿರುವ ಮತ ಎಣಿಕೆಗೆ ಮುನ್ನ ಬಿಜೆಪಿ ಯಂತ್ರಗಳನ್ನು ತಿರುಚುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com