7 ಗಂಟೆಗಳಲ್ಲಿ 416 ಮದುವೆ: ಕೇರಳಿಗರ ಚಿಂಗಂ ತಿಂಗಳ ಮೊದಲ ಭಾನುವಾರ ಗುರುವಾಯೂರು ದೇವಸ್ಥಾನದಲ್ಲಿ ದಾಖಲೆಯ ವಿವಾಹ !

ನಿನ್ನೆ ಭಾನುವಾರ ನಸುಕಿನ ಜಾವ 4.10ಕ್ಕೆ ಆರಂಭಗೊಂಡು ಮಧ್ಯಾಹ್ನ 12.45ಕ್ಕೆ ಮುಕ್ತಾಯಗೊಂಡ ವಿವಾಹ ಕಾರ್ಯಕ್ರಮವು, 2024ರ ಸೆಪ್ಟೆಂಬರ್ 8ರಂದು ಒಂದೇ ದಿನದಲ್ಲಿ ನಡೆದಿದ್ದ 334 ಮದುವೆಗಳ ಹಿಂದಿನ ದಾಖಲೆಯನ್ನು ಸುಲಭವಾಗಿ ಮುರಿದಿದೆ.
416 Weddings in Just Over Seven Hours: Guruvayur Temple Sets New Historic Record
ಏಳು ಗಂಟೆ ಅವಧಿಯಲ್ಲಿ ಗುರುವಾಯೂರು ದೇವಸ್ಥಾನದಲ್ಲಿ 416 ಮದುವೆಗಳು
Updated on

ತ್ರಿಶೂರ್: ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ನಿನ್ನೆ ಭಾನುವಾರ ಅಪೂರ್ವ ದೃಶ್ಯವೊಂದು ಕಂಡುಬಂದಿದ್ದು, ಕೇವಲ ಏಳು ಗಂಟೆ ಅವಧಿಯಲ್ಲಿ ದಾಖಲೆಯ 416 ಮದುವೆಗಳು ನೆರವೇರಿವೆ. ಮಲಯಾಳಂ ಕ್ಯಾಲೆಂಡರ್‌ನ ಚಿಂಗಂ ತಿಂಗಳ ಮೊದಲ ಭಾನುವಾರದ ಶುಭ ಸಂದರ್ಭದಲ್ಲಿ ಈ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.

ನಿನ್ನೆ ಭಾನುವಾರ ನಸುಕಿನ ಜಾವ 4.10ಕ್ಕೆ ಆರಂಭಗೊಂಡು ಮಧ್ಯಾಹ್ನ 12.45ಕ್ಕೆ ಮುಕ್ತಾಯಗೊಂಡ ವಿವಾಹ ಕಾರ್ಯಕ್ರಮವು, 2024ರ ಸೆಪ್ಟೆಂಬರ್ 8ರಂದು ಒಂದೇ ದಿನದಲ್ಲಿ ನಡೆದಿದ್ದ 334 ಮದುವೆಗಳ ಹಿಂದಿನ ದಾಖಲೆಯನ್ನು ಸುಲಭವಾಗಿ ಮುರಿದಿದೆ. ಸ್ಥಳದಲ್ಲೇ ನೋಂದಣಿ ಸೇರಿದಂತೆ ಒಟ್ಟು 442 ಮದುವೆಗಳಿಗೆ ನೋಂದಣಿ ನಡೆದಿದ್ದರೂ, ನಿನ್ನೆ ಒಂದೇ ದಿನ 416 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಗುರುವಾಯೂರು ದೇವಸ್ಥಾನದ ಪೂರ್ವ ದ್ವಾರ ಸಮೀಪದ ಮೊದಲ ಮಂಟಪದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎ.ವಿ. ಗೋಪಿನಾಥ್ ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ದಾಖಲೆಯ ವಿವಾಹ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

416 Weddings in Just Over Seven Hours: Guruvayur Temple Sets New Historic Record
ಡಿ.ಕೆ ಶಿವಕುಮಾರ್​​ಗೆ ಗುರುವಿನ ಆಶೀರ್ವಾದವಿದೆ; ಮುಖ್ಯಮಂತ್ರಿಗಳಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ

ಸಾಂಪ್ರದಾಯಿಕ ಮಂಗಳವಾದ್ಯ ನಾದದ ನಡುವೆ ಮೊದಲ ಮದುವೆ ಕಣ್ಣೂರು ಜಿಲ್ಲೆಯ ತಲಶ್ಶೇರಿಯ ಅರ್ಣವ್ ಮೋಹನ್ ಕುಮಾರ್ ಮತ್ತು ಪಝಯಂಗಡಿಯ ವಿದ್ಯಾ ಆನಂದ್ ರಾಜ್ ಅವರದ್ದು ನೆರವೇರಿತು. ನಿಗದಿಪಡಿಸಿದ್ದ ಮತ್ತೈದು ಮಂಟಪಗಳಲ್ಲೂ ಏಕಕಾಲದಲ್ಲಿ ಮದುವೆ ಸಮಾರಂಭಗಳು ನಡೆದವು.

ನಿರಂತರವಾಗಿ ವಿವಾಹಗಳು ನಡೆಯುತ್ತಿದ್ದು, ದೇವಸ್ಥಾನದ ನಿಯಮಿತ ಪೂಜೆಗಳಾದ ಉಷಾ ಪೂಜೆ (ಬೆಳಗ್ಗೆ 5.47ರಿಂದ 6.12ರವರೆಗೆ) ಮತ್ತು ಪಂತೀರಾಡಿ ಪೂಜೆಗಾಗಿ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಿದಾಗ ಮಾತ್ರ ಸ್ವಲ್ಪ ಸಮಯ ವಿರಾಮ ನೀಡಲಾಯಿತು. ವಿವಾಹಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಕುಟುಂಬಗಳು ಮತ್ತು ಭಕ್ತರನ್ನು ನಿರ್ವಹಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಪೂರ್ವ ದ್ವಾರದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಸಿ. ಮನೋಜ್, ಮನೋಜ್ ಬಿ. ನಾಯರ್ ಮತ್ತು ಎಂ.ಯು. ಶಿಂಜಾ, ಉಪ ಆಡಳಿತಾಧಿಕಾರಿಗಳಾದ ಪ್ರಮೋದ್ ಕಲರಿಕ್ಕಲ್ ಮತ್ತು ಎಂ. ರಾಧಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಮಲ್ ಜಿ. ನಾಥ್, ಸಹಾಯಕ ವ್ಯವಸ್ಥಾಪಕ ಎ.ವಿ. ಪ್ರಶಾಂತ್, ಆರೋಗ್ಯ ಮೇಲ್ವಿಚಾರಕ ಎಂ.ಎನ್. ರಾಜೀವ್ ಹಾಗೂ ಭದ್ರತಾ ಮೇಲ್ವಿಚಾರಕ ಸುಬ್ರಹ್ಮಣ್ಯನ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಗುರುವಾಯೂರು ಎಸಿಪಿ ಸುರೇಂದ್ರನ್ ಮಂಗಾಟ್, ದೇವಸ್ಥಾನ ಸಿಐ ಜಯಪ್ರದೀಪ್ ಮತ್ತು ಎಸ್‌ಐ ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ನಾಗರಿಕ ಪೊಲೀಸರು ದೇವಸ್ಥಾನದ ಆವರಣದಲ್ಲಿ ದಿನದ 24 ಗಂಟೆಯೂ ಭದ್ರತೆ ಒದಗಿಸಿದರು.

ಅಗ್ನಿಶಾಮಕ ಅಧಿಕಾರಿ ಸಜಿತ್ ಲಾಲ್ ನೇತೃತ್ವದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯನ್ನು ಒಳ ವರ್ತುಲ ರಸ್ತೆಯ ಸಮೀಪ ನಿಯೋಜಿಸಲಾಗಿತ್ತು. ದಕ್ಷಿಣ ದ್ವಾರದಲ್ಲಿ ವಿಶೇಷ ವೈದ್ಯಕೀಯ ಶಿಬಿರವನ್ನು ಸ್ಥಾಪಿಸಲಾಗಿತ್ತು.

ಗುರುವಾಯೂರು ನಗರಸಭೆ ಅಧ್ಯಕ್ಷೆ ಸುನೀತಾ ಅರವಿಂದನ್ ಮತ್ತು ಉಪಾಧ್ಯಕ್ಷೆ ಕೆ.ಕೆ. ಜ್ಯೋತಿ ರಾಜ್ ಕೂಡ ಸ್ಥಳಕ್ಕೆ ಭೇಟಿ ನೀಡಿ, ನಾಗರಿಕ ವ್ಯವಸ್ಥೆಗಳ ಸಮನ್ವಯವನ್ನು ಪರಿಶೀಲಿಸುವುದರ ಜೊತೆಗೆ ಅಗತ್ಯ ಸಹಕಾರ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com