Prime Minister Narendra Modi with President of Seychelles Patrick Herminie prior
ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಜೊತೆಗೆ ಪ್ರಧಾನಿ ಮೋದಿ

'ಸೆಶೆಲ್ಸ್' ಗೆ 175 ಮಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ!

ಸುಸ್ಥಿರತೆ, ವ್ಯಾಪಾರ, ಆರ್ಥಿಕತೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಉಭಯ ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ.
Published on

ನವದೆಹಲಿ: ಭಾರತ ಸೋಮವಾರ ಸೆಶೆಲ್ಸ್‌ಗೆ 175 ಮಿಲಿಯನ್ ಡಾಲರ್ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪ ರಾಷ್ಟ್ರ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಜೊತೆಗೆ ವ್ಯಾಪಕ ಮಾತುಕತೆ ನಡೆಸಿದ ನಂತರ ಈ ಘೋಷಣೆ ಮಾಡಿದ್ದಾರೆ.

ಸುಸ್ಥಿರತೆ, ವ್ಯಾಪಾರ, ಆರ್ಥಿಕತೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಉಭಯ ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ. ಹೆರ್ಮಿನಿ ಆರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಸೆಶೆಲ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತಕ್ಕೆ ಪ್ರಮುಖ ಕಡಲ ನೆರೆಯ ರಾಷ್ಟ್ರವಾಗಿದೆ.

ಭಾರತ ಮತ್ತು ಸೆಶೆಲ್ಸ್ ಕೇವಲ ಭೌಗೋಳಿಕತೆಯಿಂದ ಸಂಪರ್ಕ ಹೊಂದಿಲ್ಲ. ಆದರೆ ಇತಿಹಾಸ, ನಂಬಿಕೆ ಮತ್ತು ಭವಿಷ್ಯದ ದೃಷ್ಟಿಯಿಂದ ಸಂಪರ್ಕ ಹೊಂದಿವೆ" ಎಂದು ಮೋದಿ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಭಿವೃದ್ಧಿ ಪಾಲುದಾರಿಕೆಯು ಭಾರತ-ಸೆಶೆಲ್ಸ್ ಸಂಬಂಧಗಳಲ್ಲಿ ಬಲವಾದ ಅಡಿಪಾಯ ಎಂದಿದ್ದಾರೆ.

"ನಮ್ಮ ಎಲ್ಲಾ ಪ್ರಯತ್ನಗಳು ಸೆಶೆಲ್ಸ್‌ನ ಆದ್ಯತೆಗಳು ಮತ್ತು ಅಗತ್ಯಗಳನ್ನು ಆಧರಿಸಿವೆ. ಈ ದಿಕ್ಕಿನಲ್ಲಿ ಮುಂದುವರಿಯಲಿದ್ದು, ಇಂದು ನಾವು 175 ಮಿಲಿಯನ್ ಡಾಲರ್ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದೇವೆ.

ಈ ಪ್ಯಾಕೇಜ್ ಸಾಮಾಜಿಕ ವಸತಿ, ವೃತ್ತಿಪರ ತರಬೇತಿ, ಆರೋಗ್ಯ, ರಕ್ಷಣೆ ಮತ್ತು ಕಡಲ ಭದ್ರತೆಯಂತಹ ಕ್ಷೇತ್ರಗಳಲ್ಲಿ ಸೂಕ್ತ ಯೋಜನೆಗಳಿಗೆ ಸಾಥ್ ನೀಡಲಿದೆ. ಉಭಯ ರಾಷ್ಟ್ರಗಳ ನಡುವಿನ ಜನರ ಬಾಂಧವ್ಯ ಕೂಡಾ ಹೆಚ್ಚಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Prime Minister Narendra Modi with President of Seychelles Patrick Herminie prior
ಕೇಂದ್ರ ಬಜೆಟ್ 2026: ವಿದೇಶಿ ನೆರವಿನಲ್ಲಿ ಮಹತ್ತರ ಬದಲಾವಣೆ; ಬಾಂಗ್ಲಾದೇಶಕ್ಕೆ ಅರ್ಧದಷ್ಟು ನೆರವು ಕಡಿತ!

ಜನರ ನಡುವಿನ ಉತ್ತಮ ಸಂಬಂಧ "ಭಾರತ-ಸೆಶೆಲ್ಸ್ ಸಂಬಂಧಗಳ ದೊಡ್ಡ ಶಕ್ತಿಯಾಗಿದೆ. ಸೆಶೆಲ್ಸ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಸೆಶೆಲ್ಸ್‌ನ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದೆ. ಇದೇ ವೇಳೆ ಅವರು ಕೂಡಾ ನಮ್ಮ ಸ್ನೇಹವನ್ನು ಪೀಳಿಗೆಯಿಂದ ಪೀಳಿಗೆಗೆ ಬಲಪಡಿಸಿದ್ದಾರೆ. ಇಂದಿನ ಮಾತುಕತೆಯ ನಂತರ ಭಾರತ-ಸೆಶೆಲ್ಸ್ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com