ನಟ ರಣವೀರ್‌ ಸಿಂಗ್‌ ಬಳಿಕ ಸಲ್ಮಾನ್‌ ಖಾನ್ ಬಾಮೈದ ಆಯುಷ್‌ಗೂ ಬಿಷ್ಣೋಯಿ ಗ್ಯಾಂಗ್‌ ಜೀವ ಬೆದರಿಕೆ

ಆಯುಷ್‌ಗೆ ಬೆದರಿಕೆ ಸಂದೇಶ ಕಳುಹಿಸಿದವರು ನಟ ಹಾಗೂ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರೆಂದು ಹೇಳಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಮುಂಬೈ: ನಟ ರಣವೀರ್‌ ಸಿಂಗ್‌, ನಿರ್ದೇಶಕ ರೋಹಿತ್‌ ಶೆಟ್ಟಿ ಬಳಿಕ ಇದೀಗ ಸಲ್ಮಾನ್‌ ಖಾನ್‌ ಅವರ ಬಾಮೈದ ಆಯುಷ್‌ ಶರ್ಮಾ (ಸಲ್ಮಾನ್‌ ಸೋದರಿಯ ಪತಿ) ಅವರಿಗೂ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹಚರರಿಂದ ಜೀವ ಬೆದರಿಕೆ ಬಂದಿದೆ ಎಂದು ತಿಳಿದುಬಂದಿದೆ.

ನಟ ರಣವೀರ್ ಸಿಂಗ್ ಅವರಿಗೆ ವ್ಯಾಟ್ಸ್‌ಆ್ಯಪ್‌ ಮೂಲಕ ಬೆದರಿಕೆ ಬಂದ ಒಂದು ದಿನದ ಬಳಿಕ ಆಯುಷ್ ಶರ್ಮಾಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

ಆಯುಷ್‌ಗೆ ಬೆದರಿಕೆ ಸಂದೇಶ ಕಳುಹಿಸಿದವರು ನಟ ಹಾಗೂ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರೆಂದು ಹೇಳಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲದಿದ್ದರೂ, ಇ–ಮೇಲ್ ನಿಜವಾದದ್ದೇ ಅಥವಾ ಯಾರಾದರೂ ಕಿಡಿಗೇಡಿತನ ಮಾಡಿದ್ದಾರೆಯೇ ಎಂದು ಅಪರಾಧ ವಿಭಾಗದ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆ.1ರಂದು ಮುಂಬೈನ ಜುಹು ಪ್ರದೇಶದಲ್ಲಿರುವ ನಿರ್ದೇಶಕ ಹಾಗೂ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ಶೂಟರ್‌ಗಳು ಐದು ಸುತ್ತು ಗುಂಡು ಹಾರಿಸಿದ್ದರು. ಬಳಿಕ ನಟ ರಣವೀರ್‌ ಸಿಂಗ್‌ಗೆ ವಾಯ್ಸ್ ನೋಟ್‌ ಮೂಲಕ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಬಂದಿತ್ತು.

File photo
ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ನಟ ರಣವೀರ್ ಸಿಂಗ್‌ಗೆ ಬೆದರಿಕೆ: ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡ್‌; ಭದ್ರತೆ ಹೆಚ್ಚಳ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com