Banswada ಸಂಘರ್ಷ: ಫೈರ್ ಬ್ರಾಂಡ್ ಶಾಸಕ ರಾಜಾ ಸಿಂಗ್ ಬಂಧನ!

ರಾಜಾ ಸಿಂಗ್ ಅವರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬನ್ಸ್ವಾಡ ಮತ್ತು ಕಾಮರೆಡ್ಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದರು.
MLA Raja Singh Arrested in Medak
ಎಂಎಲ್ಎ ರಾಜಾಸಿಂಗ್
Updated on

ಹೈದರಾಬಾದ್: ಹೈದರಾಬಾದ್ ನ ಗೋಶಮಹಲ್ ಶಾಸಕ ರಾಜಾ ಸಿಂಗ್ ಅವರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಕೋಮು ಸಂಘರ್ಷ ಪೀಡಿತ ಬನ್ಸ್ವಾಡಕ್ಕೆ ಹೋಗುತ್ತಿದ್ದಾಗ ಪೆದ್ದಶಂಕರಂಪೇಟೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ನಂತರ, ರಾಜಾ ಸಿಂಗ್ ಅವರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬನ್ಸ್ವಾಡ ಮತ್ತು ಕಾಮರೆಡ್ಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದರು.

ಅಂತೆಯೇ ತೆಲಂಗಾಣ ಬಿಜೆಪಿ ಮುಖ್ಯಸ್ಥ ರಾಮಚಂದ್ರ ರಾವ್ ಅವರನ್ನು ಈಗಾಗಲೇ ತರ್ನಾಕದಲ್ಲಿರುವ ಅವರ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ. ಕಾಮರೆಡ್ಡಿಗೆ ಹೋಗಲು ಪ್ರಯತ್ನಿಸಿದಾಗ ಅವರನ್ನು ಪೊಲೀಸರು ಬಂಧಿಸಿದರು. ನಂತರ, ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಹೇಳಿದರು.

MLA Raja Singh Arrested in Medak
'UPIಗೆ ಬುನಾದಿ ಹಾಕಿದ್ದೇ ನಾವು.. ಆದ್ರೆ ಮೋದಿ ಸರ್ಕಾರದಿಂದ ಕ್ರೆಡಿಟ್ ಹೈಜಾಕ್': ಕಾಂಗ್ರೆಸ್ ನಾಯಕರಿಗೆ ಚಿದಂಬರಂ ವಿಡಿಯೋ ತಿರುಗೇಟು!

ಕಾಮರೆಡ್ಡಿ, ಬನ್ಸ್ವಾಡದಲ್ಲಿ ಉದ್ವಿಗ್ನತೆ

ತೆಲಂಗಾಣದ ಪುರಸಭೆ ಚುನಾವಣೆಯ ಫಲಿತಾಂಶದ ನಂತರ, ಕಾಮರೆಡ್ಡಿ ಅಧ್ಯಕ್ಷರ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಸಭೆ ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ, ಸರ್ಕಾರಿ ಸಲಹೆಗಾರ ಶಬ್ಬೀರ್ ಅಲಿ ಕಾಮರೆಡ್ಡಿ ಶಾಸಕ ಮಹೇಶ್ವರ ರೆಡ್ಡಿ ಮತ್ತು ಅವರ ತಂದೆಯ ವಿರುದ್ಧ ಆರೋಪಗಳನ್ನು ಮಾಡಿದರು. ಇದಕ್ಕೆ ಅಲ್ಲಿದ್ದ ಶಾಸಕರು ತೀವ್ರವಾಗಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿಯ ಕೆಳ ಹಂತದ ನಾಯಕರು ಕೂಡ ಈ ಬಗ್ಗೆ ಆರೋಪ ಮತ್ತು ಪ್ರತಿ-ಆರೋಪಗಳನ್ನು ಮಾಡಿದರು.

ಈ ವಿವಾದ ವಿಕೋಪಕ್ಕೆ ತಿರುಗಿದ್ದು, ಕಾಂಗ್ರೆಸ್ ನಾಯಕ.. ಬಿಜೆಪಿ ಶಾಸಕರು ಕಾರಿನಲ್ಲಿ ಕ್ಯಾಂಪ್ ಕಚೇರಿಗೆ ಹೋಗಲು ಪ್ರಯತ್ನಿಸಿದರು. ಬಿಜೆಪಿ ಕಾರ್ಯಕರ್ತರು ಇದನ್ನು ವಿರೋಧಿಸಿದರು. ಸ್ಥಳೀಯವಾಗಿ ಉದ್ವಿಗ್ನತೆ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕನ ಕಾರನ್ನು ಧ್ವಂಸಗೊಳಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ಚದುರಿಸಿದರು.

ಕೋಮು ಸಂಘರ್ಷ

ಮತ್ತೊಂದೆಡೆ, ಅದೇ ಜಿಲ್ಲೆಯ ಬನ್ಸ್‌ವಾಡದಲ್ಲಿರುವ ಸೂಪರ್‌ ಮಾರ್ಕೆಟ್‌ನಲ್ಲಿ ಒಂದು ಧರ್ಮಕ್ಕೆ ಸೇರಿದ ಹಾಡನ್ನು ನುಡಿಸುವುದಕ್ಕೆ ಇನ್ನೊಂದು ಧರ್ಮಕ್ಕೆ ಸೇರಿದ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದರು. ಇದು ವಿವಾದಕ್ಕೆ ಕಾರಣವಾಯಿತು. ವಾಗ್ವಾದ ದೊಡ್ಡದಾಗುತ್ತಿದ್ದಂತೆ, ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿತು. ಪೊಲೀಸರು ಮಧ್ಯಪ್ರವೇಶಿಸಿದರು. ಒಂದು ಗುಂಪು ಅವರ ಮೇಲೆ ಕಲ್ಲು ತೂರಾಟ ನಡೆಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com