TamilNadu: 50 ಅಕ್ರಮ ಬಾಂಗ್ಲಾದೇಶಿ ವಲಸಿಗರ ವಾಪಸ್ ಅಟ್ಟಿದ ಪೊಲೀಸರು, ರೈಲಿನಲ್ಲಿ ಬಂಗಾಳಕ್ಕೆ ರವಾನೆ!

ತಿರುಚಿರಾಪಳ್ಳಿಗೆ ತಲುಪಿದ ಬಳಿಕ, ಅವರು ಹೌರಾ ಎಕ್ಸ್‌ಪ್ರೆಸ್ ರೈಲಿನ ವಿಶೇಷವಾಗಿ ಮೀಸಲಿಟ್ಟ ಬೋಗಿಯಲ್ಲಿ ಅವರನ್ನು ಬಂಗಾಳಕ್ಕೆ ರವಾನೆ ಮಾಡಲಾಗಿದೆ.
50 Bangladeshis sent from TN to Bengal
ಅಕ್ರಮ ಬಾಂಗ್ಲಾ ನಿವಾಸಿಗಳು ವಾಪಸ್
Updated on

ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡಿನಿಂದ 50 ಬಾಂಗ್ಲಾದೇಶೀಯರನ್ನು ಗಡಿಪಾರು ಮಾಡಲಾಗಿದ್ದು, ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೌದು.. ಗಡಿಪಾರು ಆದೇಶದ ಹಿನ್ನೆಲೆಯಲ್ಲಿ 50 ಬಾಂಗ್ಲಾದೇಶದ ಪ್ರಜೆಗಳನ್ನು ಅವರ ತಾಯ್ನಾಡಿಗೆ ಮರಳಿಸುವ ಪ್ರಕ್ರಿಯೆಯ ಭಾಗವಾಗಿ ತಮಿಳುನಾಡಿನಿಂದ ರೈಲಿನ ಮೂಲಕ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿಪಾರುಗೊಂಡವರಲ್ಲಿ 44 ಪುರುಷರು ಮತ್ತು ಆರು ಮಹಿಳೆಯರು ಸೇರಿದ್ದಾರೆ. ಇವರು ಈವರೆಗೆ ಸೇಲಂ ಜಿಲ್ಲೆಯ ಅತ್ತೂರು ತಾಲ್ಲೂಕು ಕಚೇರಿ ಆವರಣದಲ್ಲಿರುವ ವಿಶೇಷ ಬಂಧನ ಶಿಬಿರದಲ್ಲಿ ಇರಿಸಲಾಗಿತ್ತು. ಅಧಿಕೃತ ಗಡಿಪಾರು ಆದೇಶ ಹೊರಬಿದ್ದ ನಂತರ, ಜುಲೈ 3ರಂದು ಬಿಗಿ ಭದ್ರತೆಯ ನಡುವೆ ಮೂವರು ವ್ಯಾನ್‌ಗಳಲ್ಲಿ ರಸ್ತೆ ಮಾರ್ಗವಾಗಿ ಅವರನ್ನು ತಿರುಚಿರಾಪಳ್ಳಿಗೆ ಕರೆದೊಯ್ಯಲಾಯಿತು.

50 Bangladeshis sent from TN to Bengal
ದೀದಿಗೆ ಮತ್ತೊಂದು ಶಾಕ್; ಮಮತಾ ಬಣದ TMC ರಾಜ್ಯಾಧ್ಯಕ್ಷೆ ಸ್ಥಾನಕ್ಕೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ!

ತಿರುಚಿರಾಪಳ್ಳಿಗೆ ತಲುಪಿದ ಬಳಿಕ, ಅವರು ಹೌರಾ ಎಕ್ಸ್‌ಪ್ರೆಸ್ ರೈಲಿನ ವಿಶೇಷವಾಗಿ ಮೀಸಲಿಟ್ಟ ಬೋಗಿಯಲ್ಲಿ ಅವರನ್ನು ಬಂಗಾಳಕ್ಕೆ ರವಾನೆ ಮಾಡಲಾಗಿದೆ. ಸೇಲಂ ಸಶಸ್ತ್ರ ಮೀಸಲು ಪಡೆಯ ಉಪ ಪೊಲೀಸ್ ಅಧೀಕ್ಷಕ ಶಕ್ತಿವೆಲ್ ಅವರ ನೇತೃತ್ವದ 40 ಸದಸ್ಯರ ಸಶಸ್ತ್ರ ಪೊಲೀಸ್ ತಂಡ ಅವರನ್ನು ರೈಲಿನಲ್ಲಿ ಭದ್ರತೆಯೊಂದಿಗೆ ಕರೆದೊಯ್ಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಹರಿದಾಸ್‌ಪುರ ಭೂ ಗಡಿಯಲ್ಲಿ ತಮಿಳುನಾಡು ಪೊಲೀಸರು ಈ ಬಾಂಗ್ಲಾದೇಶದ ಪ್ರಜೆಗಳನ್ನು ಅಧಿಕೃತವಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ. ಬಳಿಕ ಬಿಎಸ್‌ಎಫ್ ಅಧಿಕಾರಿಗಳು ಅವರನ್ನು ಬಾಂಗ್ಲಾದೇಶದ ಅಧಿಕಾರಿಗಳಿಗೆ ಅಧಿಕೃತವಾಗಿ ಒಪ್ಪಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ದಾಖಲೆಗಳಿಲ್ಲದೆ ಭಾರತದಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಉದ್ದೇಶದಿಂದ ಸ್ಥಾಪಿಸಲಾದ ಅತ್ತೂರು ವಿಶೇಷ ಶಿಬಿರದಲ್ಲಿ ಪ್ರಸ್ತುತವೂ 130ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಇದ್ದಾರೆ. ಇವರ ಪ್ರಕರಣಗಳು ಇನ್ನೂ ವಿಚಾರಣೆಯಲ್ಲಿದ್ದು ಅಥವಾ ಕೆಲವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com