ಮಮತಾ ಬ್ಯಾನರ್ಜಿಗೆ ಮತ್ತೊಂದು ದೊಡ್ಡ ಹೊಡೆತ: BJP ತಂತ್ರಕ್ಕೆ ದೀದಿ ಸುಸ್ತು; ಕೇಸರಿ ಪಾಳಯಕ್ಕೆ 3 ಮಾಜಿ ಸಂಸದರು ಸೇರ್ಪಡೆ!

ತೃಣಮೂಲ ಕಾಂಗ್ರೆಸ್‌ನ ಮೂವರು ಮಾಜಿ ರಾಜ್ಯಸಭಾ ಸಂಸದರು ಬಿಜೆಪಿ ಸೇರಿದ್ದಾರೆ. ಹಿರಿಯ ಬಿಜೆಪಿ ನಾಯಕ ಮತ್ತು ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ಸುಖೇಂದು ಶೇಖರ್ ರೇ, ಸುಷ್ಮಿತಾ ದೇಬ್ ಮತ್ತು ಪ್ರಕಾಶ್ ಚಿಕ್ ಬರೈಕ್ ಮೂವರನ್ನು ಬಿಜೆಪಿಗೆ ಬರಮಾಡಿಕೊಂಡರು.
Former TMC MPs join BJP
ಬಿಜೆಪಿ ಸೇರಿದ ಮೂವರು ಮಾಜಿ ಟಿಎಂಸಿ ಸಂಸದರು
Updated on

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ತೃಣಮೂಲ ಕಾಂಗ್ರೆಸ್‌ನ ಮೂವರು ಮಾಜಿ ರಾಜ್ಯಸಭಾ ಸಂಸದರು ಬಿಜೆಪಿ ಸೇರಿದ್ದಾರೆ. ಹಿರಿಯ ಬಿಜೆಪಿ ನಾಯಕ ಮತ್ತು ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ಸುಖೇಂದು ಶೇಖರ್ ರೇ, ಸುಷ್ಮಿತಾ ದೇಬ್ ಮತ್ತು ಪ್ರಕಾಶ್ ಚಿಕ್ ಬರೈಕ್ ಮೂವರನ್ನು ಬಿಜೆಪಿಗೆ ಬರಮಾಡಿಕೊಂಡರು. ಇದು ನಿಜಕ್ಕೂ ಬಹಳ ಸಂತೋಷದ ವಿಷಯ. ಅಂತಹ ಪ್ರಮುಖ ನಾಯಕರು ಇಂದು ಭಾರತೀಯ ಜನತಾ ಪಕ್ಷದ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿಶ್ವಾಸದಿಂದ ಮುಂದುವರಿಯುತ್ತಿದ್ದಾರೆ ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ಹೇಳಿದರು.

ಭಾರತೀಯ ಜನತಾ ಪಕ್ಷವು ರಾಷ್ಟ್ರೀಯ ಪಕ್ಷ. ಆದ್ದರಿಂದ, ನಾನು ರಾಜ್ಯಸಭಾ ಸ್ಥಾನವನ್ನು ನಿರೀಕ್ಷಿಸಿ ಇಲ್ಲಿಗೆ ಬಂದಿಲ್ಲ. ಬದಲಿಗೆ ಬಂಗಾಳದ ಹಾಲಿ ಸಂಸದೆಯಾಗಿ ಬಂದಿದ್ದೇನೆ. ನಾನು ಮೊದಲೇ ಹೇಳಿದಂತೆ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶದಲ್ಲಿ ಮತ್ತು 'ಡಬಲ್-ಎಂಜಿನ್' ಸರ್ಕಾರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಮಾಡಿದ ಕೆಲಸಗಳನ್ನು ನಿರಾಕರಿಸಲಾಗದು. ಯಾರೂ ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಜನರಿಗೆ ನಾನು ಹೇಳಲು ಬಯಸುತ್ತೇನೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಪ್ರಧಾನಿ ಮೋದಿಯವರಿಗೆ ಕೇವಲ ಎರಡು ವರ್ಷಗಳನ್ನು ನೀಡಿ. ಅಸ್ಸಾಂ ಮತ್ತು ತ್ರಿಪುರದ ಚಿತ್ರಣ ಬದಲಾದಂತೆಯೇ, ಪಶ್ಚಿಮ ಬಂಗಾಳದ ಚಿತ್ರಣವೂ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನೀವು ನೋಡುತ್ತೀರಿ ಬಿಜೆಪಿ ಸೇರಿದ ಸುಶ್ಮಿತಾ ದೇವ್ ಹೇಳಿದ್ದಾರೆ.

Former TMC MPs join BJP
ತಾಳ್ಮೆ ಕಳೆದುಕೊಂಡ ಮಮತಾ ಬ್ಯಾನರ್ಜಿ: ತನ್ನದೇ ಪಕ್ಷದ ಕಾರ್ಯಕರ್ತನ ಕಪಾಳಕ್ಕೆ ಬಾರಿಸಿದ ದೀದಿ, Video!

ಬಿಜೆಪಿ ಸೇರಿದ ನಂತರ, ಟಿಎಂಸಿಯ ಮಾಜಿ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್, ಈ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿರುವ ಪ್ರತಿಯೊಂದು ಕಾರ್ಯಸೂಚಿಯ ವಿಷಯದ ಬಗ್ಗೆ ವೇಗವಾಗಿ ಮತ್ತು ಹುರುಪಿನಿಂದ ಕೆಲಸ ಮಾಡಲು ಪ್ರಾರಂಭಿಸಿದೆ. ಸಾರ್ವಜನಿಕರು ಇದರಿಂದ ಸಂತೋಷಗೊಂಡಿದ್ದಾರೆ. ಹೆಚ್ಚಿನ ಕೆಲಸಗಳು ಬರಲಿವೆ ಮತ್ತು ಅದಕ್ಕಾಗಿಯೇ ನಾವು ಹೆಚ್ಚಿನ ಭರವಸೆ ಮತ್ತು ಸಂತೋಷದಿಂದ ತುಂಬಿದ್ದೇವೆ. ಸುಖೇಂದು ಶೇಖರ್ ರಾಯ್ ಅವರು ದೇಶದಲ್ಲಿ 800 ಸಂಸದರಿದ್ದಾರೆ ಎಂದು ಹೇಳಿದರು. ಆರ್‌ಜಿ ಕಾರ್ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ತಿರುಚಲಾಗುತ್ತಿರುವುದನ್ನು ಪರಿಗಣಿಸಿ, ಆ 800 ಜನರಲ್ಲಿ, ಪೊಲೀಸ್ ಆಯುಕ್ತರು ಮತ್ತು ಸಂಸ್ಥೆಯ ಪ್ರಾಂಶುಪಾಲರನ್ನು ಬಂಧಿಸಿ ಪ್ರಶ್ನಿಸಬೇಕೆಂದು ಸಾರ್ವಜನಿಕವಾಗಿ ಒತ್ತಾಯಿಸಿದ ಏಕೈಕ ವ್ಯಕ್ತಿ ನಾನೇ. ಬೇರೆ ಯಾರಿಗೂ ಹಾಗೆ ಮಾಡಲು ಧೈರ್ಯವಿರಲಿಲ್ಲ. ಒಂದೇ ದಿನದಲ್ಲಿ ಎರಡು ಬಾರಿ ನೋಟಿಸ್ ಕೊಟ್ಟಿದ್ದರು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com