ರೈಲು ಕಿಟಕಿ ಮೂಲಕ ಮಕ್ಕಳಿಗೆ ಮೂತ್ರ ವಿಸರ್ಜನೆ ಮಾಡಿಸಿದ ತಾಯಿ; Viral Video

ಮತ್ತೊಂದೆಡೆ, ರೈಲಿನ ಶೌಚಾಲಯಗಳು ತುಂಬಾ ಕೊಳಕಾಗಿದ್ದು, ಮಕ್ಕಳಿಗೆ ಸೋಂಕು ತಗುಲಬಾರದೆಂದು ಮಹಿಳೆ ಮಕ್ಕಳಿಗೆ ಕಿಟಕಿಯಲ್ಲಿ ಮೂತ್ರ ಮಾಡಿಸಿರಬಹುದು, ತಾಯಿ ತನ್ನ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾಡಿದ ಕ್ರಮ ಸರಿಯಾಗಿದೆ ಎಂದಿದ್ದಾರೆ.
Mother urinates children through train window
ಕಿಟಕಿ ಮೂಲಕ ಮೂತ್ರ ಮಾಡಿಸಿದ ತಾಯಿ
Updated on

ರೈಲಿನ ಬೋಗಿಯ ಕಿಟಕಿ ಬದಿ ಕುಳಿತ ಗುಲಾಬಿ ಸೀರೆ ಧರಿಸಿದ ಮಹಿಳೆ ಇಬ್ಬರು ಮಕ್ಕಳನ್ನು ಕಿಟಕಿಯಲ್ಲಿ ನಿಲ್ಲಿಸಿ ಮೂತ್ರ ಮಾಡಿಸುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಕಿಟಕಿ ಮೇಲೆ ಎಮರ್ಜೆನ್ಸಿ ವಿಂಡೋ ಎಂದು ಗುರುತಿಸಿರುವುದು ಕಾಣುತ್ತದೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾಕಷ್ಟು ಟೀಕೆಗಳು, ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿ ದಂಡ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು “ಸ್ಪ್ರಿಂಕ್ಲರ್ ಪರಿಣಾಮ” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದೆಡೆ, ರೈಲಿನ ಶೌಚಾಲಯಗಳು ತುಂಬಾ ಕೊಳಕಾಗಿದ್ದು, ಮಕ್ಕಳಿಗೆ ಸೋಂಕು ತಗುಲಬಾರದೆಂದು ಮಹಿಳೆ ಮಕ್ಕಳಿಗೆ ಕಿಟಕಿಯಲ್ಲಿ ಮೂತ್ರ ಮಾಡಿಸಿರಬಹುದು, ತಾಯಿ ತನ್ನ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾಡಿದ ಕ್ರಮ ಸರಿಯಾಗಿದೆ ಎಂದಿದ್ದಾರೆ.

ಭಾರತೀಯ ರೈಲ್ವೆ ರೈಲಿನ ಬೋಗಿಗಳಲ್ಲಿ, ಶೌಚಾಲಯಗಳಲ್ಲಿ ಸ್ವಚ್ಛತೆ ಹೆಚ್ಚಿಸಲು AI ಆಧಾರಿತ ಕ್ಯಾಮೆರಾಗಳು ಮತ್ತು ವೇಗದ ಜೆಟ್ ಸ್ಪ್ರೇಗಳಂತಹ ಹೊಸ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದರೂ, ಈ ವಿಡಿಯೊ ರೈಲು ಬೋಗಿಗಳಲ್ಲಿ ಸೌಲಭ್ಯಗಳ ಕೊರತೆ ಮತ್ತು ಪ್ರಯಾಣಿಕರ ನಡೆ-ನುಡಿಗಳ ಸಮಸ್ಯೆಗಳು ಇನ್ನೂ ಮುಂದುವರಿದಿರುವುದನ್ನು ತೋರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com