

ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಎಲ್ ಪಿಜಿ ಮತ್ತು ಎಲ್ ಎನ್ ಜಿ ಅನಿಲ ಪೂರೈಕೆಗೆ ಅಡ್ಡಿಯಾಗಿರುವಂತೆಯೇ ಭಾರತದಲ್ಲಿ ಸಾಕಷ್ಟು ಕಚ್ಚಾ ತೈಲ ದಾಸ್ತಾನು ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಶುಕ್ರವಾರ ಪುನರುಚ್ಚರಿಸಿದೆ.
ಜಂಟಿ ಅಂತರ್ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ (ಮಾರ್ಕೆಟಿಂಗ್ ಮತ್ತು ಅನಿಲ ತೈಲ ಸಂಸ್ಕರಣಾ) ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶದಲ್ಲಿ ಪ್ರಸ್ತುತ ಸೂಕ್ತ ರೀತಿಯಲ್ಲಿ ಕಚ್ಚಾ ತೈಲ ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ಎರಡು ತಿಂಗಳುಗಳಿಗೆ ಆಗುವಷ್ಟು ಇಂಧನ ಪೂರೈಕೆಯಿದೆ. ಸಂಸ್ಕರಣಾಗಾರಗಳು ಪೂರ್ಣ ಅಥವಾ ಹೆಚ್ಚಿನ ಸಾಮರ್ಥ್ಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶೀಯ ಎಲ್‌ಪಿಜಿ ಉತ್ಪಾದನೆಯು ಸುಮಾರು ಶೇ. 20 ರಷ್ಟು ಹೆಚ್ಚಾಗಿದೆ ಎಂದರು.
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದಾಗಿ ಜಾಗತಿಕವಾಗಿ ಉಂಟಾಗಿರುವ ಪರಿಣಾಮವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಕಚ್ಚಾ ತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆಗಳ ಮೇಲೆ ಪರಿಣಾಮ ಬೀರಿದೆ ಮತ್ತು ಅಂತರರಾಷ್ಟ್ರೀಯ ಬೆಲೆಗಳು ಏರಿದೆ. ಆದಾಗ್ಯೂ, ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ದೇಶೀಯ ಪೂರೈಕೆಯಲ್ಲಿ ಸ್ಥಿರತೆ ಖಾತ್ರಿಗೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಪ್ರಸ್ತುತ ನಾವು ಯುದ್ಧದಂತಹ ಪರಿಸ್ಥಿತಿಯಲ್ಲಿದ್ದು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಚ್ಚಾ ತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಎಲ್ಲ ಅನಿಲಗಳ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಕಚ್ಚಾ ಬೆಲೆಗಳು ಹೆಚ್ಚಿವೆ ಮತ್ತು ಇತರ ಉತ್ಪನ್ನಗಳ ಬೆಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಏರಿಕೆಯಾಗಿವೆ. ಆದಾಗ್ಯೂ, ಭಾರತ ಸರ್ಕಾರವು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇಂದಿನಿಂದ, ನಾವು ಸಾಕಷ್ಟು ಕಚ್ಚಾ ದಾಸ್ತಾನುಗಳನ್ನು ಹೊಂದಿದ್ದೇವೆ. ಮುಂದಿನ ಎರಡು ತಿಂಗಳುಗಳಿಗೆ ಆಗುವಷ್ಟು ಇಂಧನ ಪೂರೈಕೆಯಿದೆ ಎಂದು ತಿಳಿಸಿದರು.
LPG ಮತ್ತು PNG ಗೆ ಸಂಬಂಧಿಸಿದಂತೆ ಪರಿಸ್ಥಿತಿಯು ಉತ್ತಮವಾಗಿದೆ. ನಮ್ಮ ಸಂಸ್ಕರಣಾಗಾರಗಳು ಶೇ.100 ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶೀಯ LPG ಉತ್ಪಾದನೆಯು ಶೇ.20 ರಷ್ಟು ಹೆಚ್ಚಾಗಿದೆ ಎಂದು ಸುಜಾತಾ ಶರ್ಮಾ ಹೇಳಿದರು.
ಭಾರತ ಶೇ. 90 ರಷ್ಟು LPG ಯನ್ನು ಹಾರ್ಮುಜ್ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುತ್ತದೆ. ವಾಣಿಜ್ಯ LPG ಪೂರೈಕೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿತ್ತು. ತದನಂತರ ಹಂತ ಹಂತವಾಗಿ ಮರು ಸ್ಥಾಪಿಸಲಾಯಿತು. ಕ್ರಮೇಣ ಶೇ. 20 ರಿಂದ 70ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
Advertisement