Mumbai: ತಲೆ ಬುರುಡೆಯಲ್ಲಿ ಸಿಲುಕಿದ ರಕ್ತಸಿಕ್ತ ಮಚ್ಚಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ ! ಶಾಕಿಂಗ್ ವಿಡಿಯೋ

ವಿವಾದವೊಂದಕ್ಕೆ ಸಂಬಂಧಿಸಿದಂತೆ ರೋಹಿತ್ ಮೇಲೆ ಈ ರೀತಿಯ ಹಲ್ಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎದುರಾಳಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಚ್ಚೊಂದು ರೋಹಿತ್ ತಲೆ ಬುರುಡೆಯಲ್ಲಿ ಸಿಲುಕಿಕೊಂಡಿದೆ ಎನ್ನಲಾಗಿದೆ.
Mumbai man walks into hospital with machete stuck in head, doctors save him
ತಲೆ ಬುರುಡೆಯಲ್ಲಿ ಸಿಲುಕಿದ ರಕ್ತಸಿಕ್ತ ಮಚ್ಚಿನೊಂದಿಗೆ ಬಂದ ಯುವಕ
Updated on

ಮುಂಬೈ: ತಲೆಯಲ್ಲಿ ಸಿಲುಕಿದ ರಕ್ತಸಿಕ್ತ ಮಚ್ಚಿನೊಂದಿಗೆ ಯುವಕನೋರ್ವ ಆಸ್ಪತ್ರೆಗೆ ಬಂದಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮನ್ಖುರ್ಡ್‌ನ ಪಿಎಂಜಿಪಿ ಕಾಲೋನಿ ಪ್ರದೇಶದಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ನಡೆದ ಕ್ರೂರ ಹಲ್ಲೆ ಪ್ರಕರಣ ಇದಾಗಿದೆ. ಗಾಯಾಳು ವ್ಯಕ್ತಿಯನ್ನು ರೋಹಿತ್ ನಾಗನಾಥ್ ಪವಾರ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಮೇ 1 ರಂದು ರಾತ್ರಿ 11:45 ರ ಸುಮಾರಿಗೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾದವೊಂದಕ್ಕೆ ಸಂಬಂಧಿಸಿದಂತೆ ರೋಹಿತ್ ಮೇಲೆ ಈ ರೀತಿಯ ಹಲ್ಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎದುರಾಳಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಚ್ಚೊಂದು ರೋಹಿತ್ ತಲೆ ಬುರುಡೆಯಲ್ಲಿ ಸಿಲುಕಿಕೊಂಡಿದೆ ಎನ್ನಲಾಗಿದೆ.

ದಾಳಿ ಬಳಿಕ ರೋಹಿತ್, ತಲೆ ಬುರುಡೆಯಲ್ಲಿ ಸಿಲುಕಿರುವ ಮಚ್ಚಿನೊಂದಿಗೆ ಆಸ್ಪತ್ರೆಗೆ ಬಂದಿದ್ದು, ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ನಿಂತಿರುವ ಆಘಾತಕಾರಿ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೂಡಲೇ ಚಿಕಿತ್ಸೆ ನೀಡದ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಘಟನೆ ವರದಿಯಾದ ತಕ್ಷಣ ಮಂಖುರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೇ 2 ರಂದು ನಡೆದ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಮೂವರು ಅಪ್ರಾಪ್ತ ವಯಸ್ಕರನ್ನು ಪೊಲೀಸರು ಗುರುತಿಸಿ ವಶಕ್ಕೆ ಪಡೆದಿದ್ದಾರೆ. ಬಾಲಾಪರಾಧಿಗಳನ್ನು ಡೋಂಗ್ರಿ ರಿಮಾಂಡ್ ಹೋಂಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Mumbai man walks into hospital with machete stuck in head, doctors save him
ಬೆಂಗಳೂರು: 8 ಮಕ್ಕಳ ತಂದೆ, 2ನೇ ಪತ್ನಿಯನ್ನ ಬಿಟ್ಟುಬಿಡುವಂತೆ ರೌಡಿಶೀಟರ್​​ಗೆ ಮೊದಲ ಪತ್ನಿಯಿಂದ ಚೂರಿ ಇರಿತ!

ಈ ಮಧ್ಯೆ ರೋಹಿತ್ ಪವಾರ್ ಅವರನ್ನು ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ (ಸಿಯಾನ್ ಆಸ್ಪತ್ರೆ) ದಾಖಲಿಸಲಾಗಿದ್ದು, ತಲೆಬುರುಡೆಯಲ್ಲಿ ಸಿಲುಕಿದ ಮಚ್ಚನ್ನು ವೈದ್ಯರು ತೆಗೆದಿದ್ದು, ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ, ಆದರೂ ಅವರು ವೈದ್ಯರ ನಿಗಾವಣೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com