ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಬೆನ್ನಲ್ಲೇ ಹಾಲಿನ ದರ 4 ರೂ ಹೆಚ್ಚಳ; ಜೂನ್ 1 ರಿಂದ ಜಾರಿ

ಇಂದು ನಡೆದ ಮಿಲ್ಮಾ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪರಿಷ್ಕೃತ ದರಗಳು ಜೂನ್ 1 ರಿಂದ ಜಾರಿಗೆ ಬರಲಿವೆ.
Milk price increased by Rs 4 in Kerala; to be effective from June 1
ಸಾಂದರ್ಭಿಕ ಚಿತ್ರ
Updated on

ತಿರುವನಂತಪುರಂ: ದೇವರ ನಾಡಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರಕ್ಕೇರಿದ ಬೆನ್ನಲ್ಲೇ ಕೇರಳ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ(ಮಿಲ್ಮಾ) ಜೂನ್ 1 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿನ ದರ 4 ರೂ. ಹೆಚ್ಚಳ ಮಾಡುವುದಾಗಿ ಬುಧವಾರ ಘೋಷಿಸಿದೆ.

ಇಂದು ನಡೆದ ಮಿಲ್ಮಾ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪರಿಷ್ಕೃತ ದರಗಳು ಜೂನ್ 1 ರಿಂದ ಜಾರಿಗೆ ಬರಲಿವೆ.

ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲಾಗುತ್ತಿದ್ದು, ಇದರ ಬಹುಪಾಲು ಅಂದರೆ 3.75 ರೂ. ನೇರವಾಗಿ ಡೈರಿ ರೈತರಿಗೆ ಹೋಗಲಿದೆ ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಅವರು ಹೇಳಿದ್ದಾರೆ.

Milk price increased by Rs 4 in Kerala; to be effective from June 1
ಮಹಿಳೆಯರಿಗೆ ಬಂಪರ್ ಗಿಫ್ಟ್: ಮೊದಲ ಸಂಪುಟ ಸಭೆಯಲ್ಲೇ ಉಚಿತ ಬಸ್ ಪ್ರಯಾಣ, ಆಶಾ ವೇತನ ಹೆಚ್ಚಳಕ್ಕೆ ಕೇರಳ ಅನುಮೋದನೆ

ಇತ್ತೀಚಿನ ವಿಧಾನಸಭಾ ಚುನಾವಣೆಗಳಿಂದಾಗಿ ಮಂಡಳಿಯು ಹಾಲಿನ ದರ ಪರಿಷ್ಕರಣೆಯನ್ನು ಮುಂದೂಡಿತ್ತು ಮತ್ತು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಕಾಯುತ್ತಿತ್ತು.

ಬೇಸಿಗೆಯಲ್ಲಿ ಹಾಲು ಉತ್ಪಾದನೆಯಲ್ಲಿ ತೀವ್ರ ಕುಸಿತದ ಜೊತೆಗೆ, ಹೈನುಗಾರಿಕೆ ರೈತರು, ಗಗನಕ್ಕೇರುತ್ತಿರುವ ಜಾನುವಾರು ಮೇವು ಮತ್ತು ಕಾರ್ಮಿಕ ವೆಚ್ಚಗಳಿಂದ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಹಾಲು ಒಕ್ಕೂಟಗಳು ಎತ್ತಿ ತೋರಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com