ರೂಬಿಯೊಗೆ ಇತಿಹಾಸ ತಿಳಿದಿದ್ದರೆ...: ತಾಜ್ ಮಹಲ್ ಭೇಟಿಗೆ ಇರಾನ್ ಪ್ರತಿಕ್ರಿಯೆ

ರುಬಿಯೋ ಅವರ ಸರ್ಕಾರ ಇಂದು ಇರಾನಿನ ನಾಗರಿಕತೆಯನ್ನು ಅಳಿಸಿಹಾಕುವ ಬೆದರಿಕೆ ಹಾಕುತ್ತಿದೆ, ಇತರ ನಾಗರಿಕತೆಗಳನ್ನು ಅವಮಾನಿಸುತ್ತಿದೆ" ಎಂದು ಕಾನ್ಸುಲೇಟ್ X ನಲ್ಲಿ ಪೋಸ್ಟ್ ಮಾಡಿದೆ.
 Marco Rubio
ತಾಜ್ ಮಹಲ್ ಗೆ ಭೇಟಿ ನೀಡಿದ್ದ ಮಾರ್ಕೊ ರುಬಿಯೊonline desk
Updated on

ತಾಜ್ ಮಹಲ್‌ನಲ್ಲಿ ಮಾರ್ಕೊ ರೂಬಿಯೊ ಪೋಸ್ ನೀಡಿದ್ದಕ್ಕೆ ಹೈದರಾಬಾದ್ ನಲ್ಲಿರುವ ಇರಾನ್ ದೂತವಾಸ ಕಚೇರಿ ಪ್ರತಿಕ್ರಿಯಿಸಿದೆ.

"ರುಬಿಯೊಗೆ ತಾಜ್ ಮಹಲ್ ಇತಿಹಾಸ ಅಥವಾ ವಾಸ್ತುಶಿಲ್ಪ ತಿಳಿದಿದ್ದರೆ, ಅವರು ಇಲ್ಲಿ ಚಿತ್ರಕ್ಕೆ ಪೋಸ್ ನೀಡುತ್ತಿರಲಿಲ್ಲ. ಈ ಸ್ಮಾರಕವನ್ನು ಮೊಘಲ್ ಚಕ್ರವರ್ತಿಯ ಇರಾನಿನ ಪತ್ನಿಯ ಪ್ರೀತಿಗಾಗಿ ನಿರ್ಮಿಸಲಾಗಿದೆ, ಇದನ್ನು ಇರಾನಿನ ವಾಸ್ತುಶಿಲ್ಪಿಗಳ ಪ್ರತಿಭೆಯಿಂದ ರಚಿಸಲಾಗಿದೆ - ಈ ಮಧ್ಯೆ ರುಬಿಯೋ ಅವರ ಸರ್ಕಾರ ಇಂದು ಇರಾನಿನ ನಾಗರಿಕತೆಯನ್ನು ಅಳಿಸಿಹಾಕುವ ಬೆದರಿಕೆ ಹಾಕುತ್ತಿದೆ, ಇತರ ನಾಗರಿಕತೆಗಳನ್ನು ಅವಮಾನಿಸುತ್ತಿದೆ" ಎಂದು ಕಾನ್ಸುಲೇಟ್ X ನಲ್ಲಿ ಪೋಸ್ಟ್ ಮಾಡಿದೆ.

 Marco Rubio
'ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ': ಅಮೆರಿಕಾ-ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ; ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!

ಯುನೈಟೆಡ್ ಸ್ಟೇಟ್ಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸೋಮವಾರ ತಮ್ಮ ಪತ್ನಿ ಜೀನೆಟ್ ರೂಬಿಯೊ ಅವರೊಂದಿಗೆ ಐತಿಹಾಸಿಕ ತಾಜ್ ಮಹಲ್‌ಗೆ ಭೇಟಿ ನೀಡಿದರು ಮತ್ತು ಸ್ಮಾರಕವನ್ನು ವಿಶ್ವದ ಸಂಪತ್ತಿನಲ್ಲಿ ಒಂದು ಎಂದು ಶ್ಲಾಘಿಸಿದರು.

ಅವರು ತಾಜ್ ಮಹಲ್‌ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಳೆದರು ಮತ್ತು ಸಂದರ್ಶಕರ ಪುಸ್ತಕದಲ್ಲಿ, "ವಿಶ್ವದ ನಿಜವಾದ ಸಂಪತ್ತಿನಲ್ಲಿ ಒಂದನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದರು. ಭೇಟಿಯ ಸಮಯದಲ್ಲಿ ಭಾರತದ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಕೂಡ ಅವರೊಂದಿಗೆ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com