ಸಿನಿಮಾ

ಬಹುಭಾಷಾ ನಟಿ ಭಾವನಾ- ಕನ್ನಡ ನಿರ್ಮಾಪಕ ನವೀನ್ ಮದುವೆಯ ಚಿತ್ರಗಳು

ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ನಟಿ ಭಾವನಾ ಕೇರಳದ ತ್ರಿಶೂರ್ ನಲ್ಲಿ ಕನ್ನಡ ನಿರ್ಮಾಪಕ ನವೀನ್ ಜೊತೆ ಸಪ್ತಪದಿ ತುಳಿದರು.
Published On :

ನವೀನ್ ಭಾವನಾ ಕೊರಳಿಗೆ ತಾಳಿ ಕಟ್ಟುತ್ತಿರುವ ದೃಶ್ಯ.

ಭಾವನಾ ಮದುವೆ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಮೆಹಂದಿ ಕಾರ್ಯಕ್ರಮ ಕೂಡ ಭಾರೀ ಸದ್ದು ಮಾಡುತ್ತಿದೆ. ಮೆಹಂದಿ ಕಾರ್ಯಕ್ರಮದಲ್ಲಿ ತಮ್ಮ ಆಪ್ತ ಸ್ನೇಹಿತೆಯರೊಂದಿಗೆ ಫೋಟೋಗೆ ಫೋಸ್ ಕೊಟ್ಟ ಭಾವನಾ.

ಸೋಮವಾರ ಬೆಳಗ್ಗೆ ಕೇರಳದ ತ್ರಿಶೂರ್ ನ ದೇವಸ್ಥಾನವೊಂದರಲ್ಲಿ ಮದುವೆ ನಡೆಯಿತು. ಮದುವೆ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಆಪ್ತರು ಭಾಗವಹಿಸಿದ್ದರು. ನವಜೋಡಿಯೊಂದಿಗೆ ಸೆಲ್ಫಿ ತೆಗೆಸಿಕೊಂಡ ಸ್ನೇಹಿತೆಯರು.

ಕನ್ನಡದ ಸಿನಿಮಾ ರೋಮಿಯೊದಲ್ಲಿ ಭಾವನಾ ನವೀನ್ ಅವರನ್ನು 2012ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು. ಅಲ್ಲಿಂದ ಸ್ನೇಹವಾಗಿ, ಪ್ರೀತಿಗೆ ತಿರುಗಿ ಜೋಡಿ 2017ರ ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತು.

ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಭಾವನಾ ನಂತರ ವಿಷ್ಣುವರ್ಧನ, ಬಚ್ಚನ್, ಚೌಕ ಮತ್ತು ಬಿಡುಗಡೆಯಾಗಬೇಕಿರುವ ಸೂರಿ ನಿರ್ದೇಶನದ ಶಿವರಾಜ್ ಕುಮಾರ್ ಅವರ ಟಗರು ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

ಸೋಮವಾರ ಬೆಳಗ್ಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು, ಭಾವನಾಗೆ ಮದುವೆಯ ಶುಭಾಶಯ ಕೋರಿದ್ದು ಸಖತ್ ಸುದ್ದಿಯಾಗಿದೆ.

2014ರಲ್ಲಿಯೇ ಜೋಡಿ ಮದುವೆಯಾಗಬೇಕಿತ್ತು. ಆದರೆ ಆ ವರ್ಷ ಭಾವನಾ ಹಲವು ಚಿತ್ರಗಳಲ್ಲಿ ನಟಿಸಲು ಸಹಿ ಹಾಕಿದ್ದರಿಂದ ಮದುವೆ ಮುಂದೂಡಲ್ಪಟ್ಟಿತು.

ಮದುವೆಯ ನಂತರ ಕೂಡ ನಟನೆ ಮುಂದುವರಿಸುವುದಾಗಿ ಭಾವನಾ ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ದೇವಸ್ಥಾನದ ಹೊರಗೆ ಭಾವನಾ ಮತ್ತು ನವೀನ್ ಮದುವೆ ಶಾಸ್ತ್ರದ ಬಳಿಕದ ದೃಶ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.