ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ನಂತರ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಪಂಜಾಬ್ ನ ಅಮೃತಸರದಲ್ಲಿರುವ ಸ್ವರ್ಣಮಂದಿರದಲ್ಲಿ ಕಾಣಿಸಿಕೊಂಡ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ.
ನೇರಳೆ ಬಣ್ಣದ ಹೂವುಗಳ ವಿನ್ಯಾಸದ ಕುರ್ತಾ ಪೈಜಾಮಾ ಮತ್ತು ಪ್ರಿಂಟೆಡ್ ನೆಹರೂ ಜಾಕೆಟ್ ಧರಿಸಿದ ರಣವೀರ್ ಸಿಂಗ್ ತಲೆಯನ್ನು ಸ್ಕಾರ್ಫ್ ನಿಂದ ಸುತ್ತಿಕೊಂಡಿದ್ದರು.
ದೀಪಿಕಾ ಮರೂನ್ ಬಣ್ಣದ ಎಂಬ್ರಾಯಿಡರಿ ಸಲ್ವಾರ್ ಧರಿಸಿ ಪಂಜಾಬಿ ಸಂಪ್ರದಾಯ ಶೈಲಿಯಲ್ಲಿ ದುಪ್ಪಟಾವನ್ನು ತಲೆಗೆ ಮತ್ತು ದೇಹಕ್ಕೆ ಸುತ್ತಿಕೊಂಡಿದ್ದರು. ಆಕರ್ಷಕ ಜ್ಯುವೆಲ್ಲರಿ ಮತ್ತು ಸಿಂಧೂರ ಧರಿಸಿ ದೀಪಿಕಾ ಮದುಮಗಳಂತೆ ಕಂಗೊಳಿಸುತ್ತಿದ್ದರು.
ಸ್ವರ್ಣಮಂದಿರದಲ್ಲಿ ದೀಪಿಕಾ-ರಣವೀರ್
ಸ್ವರ್ಣಮಂದಿರದ ಹರ್ಮಿಂದರ್ ಸಾಹಿಬ್ ಭೇಟಿ ಬಳಿಕ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡರು.